ಬೆಂಗಳೂರು: ಮಾರ್ಚ್‌ನಲ್ಲಿ ಕಾಣಿಸಿಕೊಂಡ ಕೊರೋನಾ ಮಹಾಮಾರಿಯಿಂದ ಕಷ್ಟದಲ್ಲಿ ಸಿಲುಕಿರುವ ಹೂವು ಹಾಗೂ ಹಣ್ಣು -ತರಕಾರಿ ಬೆಳೆಗಾರರಿಗೆ ೧ ಎಕರೆಗೆ ೨೫ ಸಾವಿರ ರೂ. ಪರಿಹಾರ ನೀಡಲಾಗಿದೆ ತೋಟಗಾರಿಕೆ ಮತ್ತು ಪೌರಾಡಳಿತ ಸಚಿವ ನಾರಾಯಣ ಗೌಡ ಅವರು ಉತ್ತರಿಸಿದರು.
ಶಾಸಕರಾದ ವಿ.ಆರ್.ರಮೇಶ್ ಅವರು, ಹೂವು ಬೆಳೆಗಾರರಿಗೆ ಹಾಗೂ ಹಣ್ಣು -ತರಕಾರಿ ಬೆಳೆಗಾರರಿಗೆ ಮಾರ್ಚ್‌ನಲ್ಲಿ ಕಾಣಿಸಿಕೊಂಡ ಕೊರೋನಾ ಮಹಾಮಾರಿಯಿಂದ ಅನ್ಯಾಯವಾಗಿದ್ದು, ಇವರಿಗೆ ಒದಗಿಸಿರುವ ಪರಿಹಾರದ ಬಗ್ಗೆ ಪ್ರಶ್ನೆ ಮಾಡಿದಾಗ, ತೋಟಗಾರಿಕೆ ಮತ್ತು ಪೌರಾಡಳಿತ ಸಚಿವರು ಇದಕ್ಕೆ ಉತ್ತರ ನೀಡಿದರು.
ಹಣ್ಣು ತರಕಾರಿ ಬೆಳೆಗಾರರಿಗೆ ಅನುಕೂಲವಾಗುವಂತೆ ತಾಲ್ಲೂಕು ಕೇಂದ್ರಗಳಲ್ಲಿ ಹಾಪ್‌ಕಾಮ್ಸ್ ತೆರೆದು ರೈತರಿಂದ ಖರೀದಿ ಮಾಡಲಾಗಿದೆ. ಜೊತೆಗೆ ಕೇರಳ ಮತ್ತು ಗುಜರಾತ್‌ಗೆ ಕಿಸಾನ್ ರೈಲು ಮೂಲಕ ತಲುಪಿಸಲಾಗಿದೆ ಎಂದರು.