ಕಲಬುರಗಿ: ಮಹಾನಗರ ಪಾಲಿಕೆ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆ.ಯು.ಐ.ಡಿ.ಎಫ್.ಸಿ.) ಹಾಗೂ ಎಲ್. ಆ್ಯಂಡ್ ಟಿ. ಕಂಸ್ಟ್ರಕ್ಷನ್ ಕಂಪನಿ ಇವುಗಳ ಸಹಯೋಗದೊಂದಿಗೆ ಕಲಬುರಗಿ ನಗರದಲ್ಲಿ 24×7 ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಲಬುರಗಿ ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಈ ಯೋಜನೆಯ ಅತ್ಯಂತ ಪ್ರಮುಖ ಅಂಶವಾದ ಗ್ರಾಹಕರ ಮಾಹಿತಿ ಸಂಗ್ರಹ ಕಾರ್ಯ ಈಗ ಪ್ರಾರಂಭಿಸಲಾಗುತ್ತಿದೆ. ಕ್ಷೇತ್ರ ಕಾರ್ಯಕರ್ತರು ಗ್ರಾಹಕರ ಸಮೀಕ್ಷೆಗಾಗಿ ನಗರದಲ್ಲಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಗ್ರಾಹಕರು ನೀಡಿದ ಮಾಹಿತಿಯು 24×7 ನೀರು ಸರಬರಾಜು ಯೋಜನೆಯ ಯಶಸ್ಸು ಅವಲಂಭಿಸಿದೆ.
ಕಲಬುರಗಿ ಮಹಾನಗರ ಪಾಲಿಕೆಯಿಂದ ಮಾಹಿತಿ ಸಂಗ್ರಹಿಸುವ ಕ್ಷೇತ್ರ ಕಾರ್ಯಕರ್ತರಿಗೆ ಗುರುತಿನ ಚೀಟಿ ಸಹ ನೀಡಲಾಗಿದೆ. ಕ್ಷೇತ್ರ ಕಾರ್ಯಕರ್ತರಿಗೆ ತಮ್ಮ ಮನೆಗೆ ಭೇಟಿ ನೀಡಿದಾಗÀ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.