ಬಿರುಗಾಳಿ ಸಹಿತ ಮಳೆಗೆ ಜನಜೀವನ ತತ್ತರ

0
133

ಕಲಬುರಗಿ: ಮಳೆರಾಯನ ಮುನಿಸಿಂದಾಗಿ ಕಂಗೆಟ್ಟಿದ್ದ ಕಲಬುರಗಿಯ ಜನತೆಗೆ ನಿನ್ನೆ ಮತ್ತು ಇಂದು ಸುರಿದ ಮಳೆ ಕೊಂಚ ಕೂಲ್  ಮಾಡಿದ್ದರೂ ಬಿರುಗಾಳಿ ಸಹಿತ ಮಳೆಗೆ ಜನತೆ ತತ್ತರಿಸುವಂತಾಗಿದೆ.

ಗುಡುಗು, ಸಿಡಿಲುಗಳ ಆರ್ಭಟ ನೋಡಿದರೆ ಇನ್ನೇನು ಮಳೆಯಿಂದಾಗಿ ಎಲ್ಲವೂ ಕೊಚ್ಷಿಕೊಂಡು ಹೋಗಲಿವೆ ಎಂಬಂತೆ ಕಂಡು ಬರುತ್ತದೆ.‌ ಆದರೆ ಅದೇನೋ ಹೇಳುತ್ತಾರಲ್ಲ ಗುಡ್ಡದಂತ ರಾಗ ಹಾಡಿ ಅದೆಂಥದೋ ಪದ ಹಾಡಿದರು ಎನ್ನುವಂತೆ ಮಳೆಯೂ ಇಲ್ಲ, ಮಣ್ಣಿನ ವಾಸನೆಯೂ ಇಲ್ಲ ಎನ್ನುವಂತಾಗಿದೆ.

Contact Your\'s Advertisement; 9902492681

ಇಂದು ಸಂಜೆ ಸುರಿದ ಬಿರುಗಾಳಿ ಸಹಿತ ಮಳೆ ಕೊಂಚ ತಂಪನ್ನೇನೋ ನೀಡಿದೆ. ಆದರೆ ಜೋರಾಗಿ ಬೀಸಿದ  ಗಾಳಿಯಿಂದಾಗಿ ಗಿಡ,ಮರಗಳು, ಮರದ ಟೊಂಗೆಗಳು ಉರುಳಿ ಬಿದ್ದಿವೆ.

ಜಿಲ್ಲೆಯ ಅನೇಕ ಕಡೆ ಮಳೆಯಾದ ಬಗ್ಗೆ ವರದಿಯಾಗಿದ್ದು, ಬಹುತೇಕ ಎಲ್ಲ ಕಡೆ ಗಿಡ, ಮರಗಳು ನೆಲಕ್ಕುರುಳಿವೆ. ಮನೆಯ ಮೇಲಿನ ಪತ್ರಾಗಳು ಉರುಳಿ ಬಿದ್ದಿವೆ. ವಾಹನಗಳು ಜಖಂಗೊಂಡಿವೆ ಎಂದು ಹೇಳಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಬಿದ್ದ ಸಿಡಿಲಿನಿಂದಾಗಿ ತೆಂಗಿನ ಮರ ಧಗ ಧಗ ಉರಿದಿದೆ.

ವಾತಾವರಣದಲ್ಲಿ ಕೊಂಚ ತಂಪು ಕಂಡು ಬರುತ್ತಿದ್ದರೂ ವಿಪರೀತ ಶಕೆಯಾಗುತ್ತಿದೆ. ಇದರಿಂದಾಗಿ ಜನತೆ ಉಸ್ಸಪ್ಪಾ ಅನ್ನುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here