ಸುರಪುರ: ರಮಜಾನ್ ಹಬ್ಬದ ಆಚರಣೆ ಅಂಗವಾಗಿ ನಗರದ ದಖನಿ ಮೊಹಲ್ಲಾದಲ್ಲಿ ಸುಮಯ್ಯಾ ಮಹಿಳಾ ಸ್ವ ಸಹಾಯ ಸಂಘದಿಂದ ಬಡ ಜನರಿಗೆ ಬಟ್ಟೆ ದವಸ ದಾನ್ಯಗಳ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಘೌಷಿಯಾ ಬೇಗಂ ಮಹ್ಮದ ಮೌಲಾ ಸೌದಾಗರ್ ಮಾತನಾಡಿ,ಇಸ್ಲಾಂ ಬಾಂಧವರ ಪವಿತ್ರ ಹಬ್ಬವಾದ ರಮಜಾನ್ ಅಂಗವಾಗಿ ಎಲ್ಲರಲ್ಲಿ ಪರಸ್ಪರ ಸ್ನೇಹ ಮತ್ತು ಸಹೋದರತೆಯನ್ನು ಮೂಡಲು ಮತ್ತು ಎಲ್ಲರು ಸಂತೋಷದಿಂದ ಹಬ್ಬ ಆಚರಿಸಲು ಸುಮಯ್ಯ ಮಹಿಳಾ ಸ್ವ ಸಹಾಯ ಸಂಘವು ಶ್ರಮಿಸುತ್ತದೆ ಎಂದರು. ಎಲ್ಲರು ಸಮಾನರು,ನಾವೆಲ್ಲ ಅಲ್ಲಾನ ಮಕ್ಕಳು ನಮ್ಮಲ್ಲಿ ಬಡವ ಶ್ರೀಮಂತ ಎಂಬ ಯಾವುದೆ ಭೇದ ಭಾವವಿಲ್ಲ. ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರು ಒಂದಾಗಿ ಹಬ್ಬ ಆಚರಿಸಲು ಹೊಸ ಬಟ್ಟೆ ಮತ್ತು ದವಸ ದಾನ್ಯಗಳ ದಾನ ಮಾಡುವ ಮೂಲಕ ಅಲ್ಲಾನ ಕೃಪೆ ಬಯಸುತ್ತೆವೆ ಎಂದರು.
ಸುಮಾರು ನೂರಾ ಐವತ್ತಕ್ಕು ಹೆಚ್ಚಿನ ಜನತೆಗೆ ಬಟ್ಟೆಗಳನ್ನು ಮತ್ತು ಅಕ್ಕಿ ಬೇಳೆ ಸೇರಿದಂತೆ ಅನೇಕ ವಿಧದ ದವಸ ದಾನ್ಯಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಶಮ್ಶದ್ ಬೇಗಂ,ನಹೀದ್ ಅಂಜುಂ,ಫಾತೀಮಾ,ಮಹ್ಮದ ಮೌಲಾಅ ಸೌದಾಗರ್,ಸಲಿಂ ನಗನೂರಿ,ಅಮ್ಜಾದ್ ಹುಸೇನ್, ಆದೀಲ್ ಸಾಬ್,ಜಾವೀದ್,ರಫೀಕ್ ಮುನ್ಸಿ,ಗೋಪಾಲ ದೊರೆ,ಮಹಿಬೂಬ ಪಗಡಿ,ಬಬ್ಲು ಸೇರಿದಂತೆ ಅನೇಕರಿದ್ದರು.