ಸುರಪುರ: ನಗರದಲ್ಲಿನ ಎಲ್‌ಪಿಜಿ ಗ್ಯಾಸ್ ವಿತರಣಾ ಏಜೆನ್ಸಿಯವರಿಂದಾಗಿ ಜನರು ಸಿಲಿಂಡರ್ ಗ್ಯಾಸ್‌ಗಾಗಿ ಪರದಾಡುವಂತಾಗಿದೆ ಎಂದು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಬೇಸರ ವ್ಯಕ್ತಪಡಿಸಿದರು.
ನಗರದ ತಹಸೀಲ್ ಕಚೇರಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ, ಸುರಪುರ ನಗರದಲ್ಲಿ ಮೂರು ಗ್ಯಾಸ್ ಏಜೆನ್ಸಿಗಳಿದ್ದು ಇದರಿಂದ ಜನರು ತಮ್ಮ ಗ್ಯಾಸ್ ಯಾರ ಬಳಿ ದೊರೆಯಲಿದೆ ಎಂದು ಸಮಸ್ಯೆಯಿಂದ ಬೇಸತ್ತಿದ್ದಾರೆ.ಒಂದು ಏಜೆನ್ಸಿಯವರ ಬಳಿ ಕೇಳಿದರೆ ನಿಮ್ಮದು ಕೆಂಭಾವಿಯವರ ಬಳಿ ಬರುತ್ತದೆ,ಮತ್ತೊಬ್ಬರನ್ನು ಕೇಳಿದರೆ ನಿಮ್ಮದು ಸಗರದವರ ಬಳಿ ಬರುತ್ತದೆ ಹೀಗೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಜನರನ್ನು ಅಲೆದಾಡುಸುವುದರಿಂದ ಜನರು ಬೇಸತ್ತಿದ್ದಾರೆ.
ಇದರಿಂದ ಬಡ ಜನರು ಗ್ಯಾಸ್ ಪಡೆಯಲು ಒಂದು ದಿನ ಕೆಲಸ ಬಿಟ್ಟು ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಾಲೂಕು ಆಡಳಿತ ಒಂದು ಏಜೆನ್ಸಿಗೆ ಸುರಪುರ,ಮತ್ತೊಂದುಏಜೆನ್ಸಿಗೆ ರಂಗಂಪೇಟೆ ದೀವಳಗುಡ್ಡ ಸತ್ಯಂಪೇಟೆ ಮತ್ತೊಂದು ಏಜೆನ್ಸಿಗೆ ಗ್ರಾಮೀಣ ಭಾಗವನ್ನು ಹಂಚಿಕೆ ಮಾಡಿದಲ್ಲಿ ಜನರ ಸಮಸ್ಯೆ ತಪ್ಪಲಿದೆ.ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜನರೊಂದಿ ನಮ್ಮ ಪಕ್ಷ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.
ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಲೋಕ ಜನಶಕ್ತಿ ಪಕ್ಷದ ತಾಲೂಕಾಧ್ಯಕ್ಷ ಹಯ್ಯಾಳಪ್ಪ ಹೊನಕೇರಿ ನಗರ ಘಟಕದ ಅಧ್ಯಕ್ಷ ಗೋಪಾಲ ದರಬಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದುರಗಪ್ಪ ಬಡಿಗೇರ ತಾಲೂಕು ಕಾರ್ಯದರ್ಶಿ ಅಂಬ್ರೇಶ ನಾಯಕ ಇದ್ದರು.