ಸುರಪುರ: ಡಾ: ಬಾಬಾ ಸಾಹೇಬ್ ಅಂಬೇಡ್ಕರರು ಛಲದಿಂದ ಶಿಕ್ಷಣ ಪಡೆಯುವ ಮೂಲಕ ಸಂವಿಧಾನ ರಚಿಸಿ ಜಗತ್ತೆ ತನ್ನತ್ತ ತಿರುಗಿ ನಿಡುವಂತೆ ಮಾಡಿದ ಮಹಾನ್ ವ್ಯಕ್ತಿ.ಅವರಂತೆ ಇಂದಿನ ಎಲ್ಲಾ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅಂಬೇಡ್ಕರರಂತೆ ಮಾಡುವಂತೆ ಮೂಲನಿವಾಸಿ ಅಂಬೇಡ್ಕರ ಸೇನೆ ರಾಜ್ಯ ಕಾರ್ಯದರ್ಶಿ ರಾಹುಲ್ ಹುಲಿಮನಿ ಮಾತನಾಡಿದರು.
ತಾಲೂಕಿನ ಮುಷ್ಠಳ್ಳಿ ಗ್ರಾಮದಲ್ಲಿ ನಡೆದ ಮಹಾನಾಯಕ ಬ್ಯಾನರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಂದು ಎಲ್ಲರು ಕೇವಲ ದೇವರು ಗುಡಿ ಗುಂಡಾರಗಳಿಗೆ ಒತ್ತು ನೀಡುತ್ತಿದ್ದಾರೆ.ಆದರೆ ಡಾ: ಬಾಬಾ ಸಾಹೇಬ್ ಅಂಬೇಡ್ಕರರು ಹೇಳುವಂತೆ ಜನರು ದೇವಾಲಯಗಳಲ್ಲಿ ಸಾಲುಗಟ್ಟಿ ನಿಲ್ಲುವ ಬದಲು ಶಾಲೆಗಳಲ್ಲಿ ನಿಂತು ಕಲಿತರೆ ದೇಶ ಬದಲಾಗಲಿದೆ ಎಂಬುದು ಅಕ್ಷರಶಃ ಸತ್ಯವಾಗಿದೆ.ಇದನ್ನು ಅರಿತು ಎಲ್ಲರು ಮಕ್ಕಳಿಗೆ ದೇವುರ ಗುಡಿಗುಂಡಾರಗಳಿಗಿಂತ ಶಾಲೆಗೆ ಕಳುಹಿಸುವ,ಉತ್ತಮ ಶಿಕ್ಷಣ ಕೊಡಿಸುವ ಬಗ್ಗೆ ನಿರ್ಧರಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ಇಂದು ಮಹಾನಾಯಕ ಧಾರಾವಾಹಿ ಇಡೀ ನಾಡಿನ ಜನರ ಮನವನ್ನು ಗೆದ್ದಿದೆ.ಇಂತಹ ಅಮೂಲ್ಯವಾದ ಧಾರವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಕೆಲವರು ರಾಘವೇಂದ್ರ ಹುಣಸೂರವರಿಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ.ಇದನ್ನು ಕಂಡಿಸುವ ಜೊತೆಗೆ ನಾವೆಲ್ಲರು ಮಹಾನಾಯಕ ಧಾರಾವಾಹಿಯನ್ನು ಬೆಂಬಲಿಸಿ ರಾಘವೇಂದ್ರ ಹುಣಸೂರವರ ಜೊತೆಗೆ ನಿಲ್ಲೋಣ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಕ್ಯಾಂಡಲ್ ಬೆಳಗಿ ನಮಿಸಲಾಯಿತು.ನಂತರ ನಗರಸಭೆ ಮಾಜಿ ಸದಸ್ಯ ವೆಂಕಟೇಶ ಹೊಸಮನಿ ಹಾಗು ಇತರೆ ಮುಖಂಡರು ಮಹಾನಾಯಕ ಬ್ಯಾನರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ಮುಖಂಡರಾದ ಆಕಾಶ ಕಟ್ಟಿಮನಿ ಪ್ರದೀಪ ಕಟ್ಟಿಮನಿ ರಮೇಶ ಬಡಿಗೇರ ಮಲ್ಲು ಮುಷ್ಠಳ್ಳಿ ಜೈಭೀಮ ಯುವಶಕ್ತಿ ಸಾಮಾಜಿಕ ಸಂಘದ ಅಧ್ಯಕ್ಷ ಯಲ್ಲಪ್ಪ ಹೊಸ್ಮನಿ ಮಾಜಿ ಗ್ರಾ.ಪಂ ಅಧ್ಯಕ್ಷ ಹಣಮಂತ್ರಾಯ ಕೆಸಿಪಿ ಗುರಪ್ಪ ಹೊಸ್ಮನಿ ಶಿವಪ್ಪ ಪೂಜಾರಿ ಮರೆಪ್ಪ ಚಲುವಾದಿ