ನಾನು ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಜಾರಿಲ್ಲ: ಸಂಸದ ಡಾ. ಉಮೇಶ ಜಾಧವ

1
125

ಕಲಬುರಗಿ: ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ಮೊದಲ ಬಾರಿಯ ಕೇಂದ್ರ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ನೀಡಿಲ್ಲ. ಇದರಿಂದ ನನಗೆ ಏನೂ ಬೇಜಾರಾಗಿಲ್ಲ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.

ನಿನ್ನೆ ರಾತ್ರಿ ಇಲ್ಲಿನ ಇಎಸ್ಐ ಆಸ್ಪತ್ರೆಯ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮುಂದಿನ ದಿನಗಳಲ್ಲಾದರೂ ಸಚಿವ ಸ್ಥಾನ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೂ ಪಕ್ಷದ ಎಲ್ಲರ ಸಲಹೆ, ಸಹಕಾರದೊಂದಿಗೆ ಮುನ್ನಡೆದು ಬಿಜೆಪಿ ಕಟ್ಟುವುದಾಗಿ ತಿಳಿಸಿದರು.

Contact Your\'s Advertisement; 9902492681

ಇಎಸ್ಐ ಆಸ್ಪತ್ರೆಗೆ ಜಾಧವ ದಿಢೀರ್‌ ಭೇಟಿ ವೈದ್ಯಕೀಯ ವೃತಿಯನ್ನು ಎತ್ತಿಹಿಡಿದ ಸಂಸದ

ಸಂಸದ ಡಾ.ಉಮೇಶ ಜಾಧವ ಭಾನುವಾರ ಇಎಸ್ಐ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ರೋಗಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಭೇಟಿ ನೀಡಿ ಪರಿಶೀಲಸಿ ಮಾಹತಿ ಪಡೆದರು.

ಡಾ. ಉಮೇಶ್ ಜಾಧವ ಅವರು ಪ್ರಥಮವಾಗಿ ಸಂಸದರಾಗಿ ಆಯ್ಕೆ ಆಗಿ, ಕೇಂದ್ರ ಸಚಿವ ಸಂಪುಟದ ನಂತರ ಕಲಬುರಗಿಗೆ ಆಗಮಿಸಿ ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಂಸದ ಜಾಧವ, ನಿನ್ನೆ ನಗರದ ಇಎಸ್ಐ ಆಸ್ಪತ್ರೆಗೆ ಧೀಡಿ ನೀಟಿ ನೀಡಿ ಆಸ್ಪತ್ರೆ ಸಿಬ್ಬಂದಿಗಳಿಗೆ ಶಾಕ್ ನೀಡಿದರು.

ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ, ತಾನು ಡಾ. ಎಂದು ರೋಗಿಗಳೊಂದಿಗೆ ಪರಿಚಯಿಸಿಕೊಂಡ ಅವರ ನೋವನ್ನು ಅರ್ಥಮಾಡಿಕೊಳುವ ಪ್ರಯತ್ನ ಮಾಡಿರುವ ಮೂಲಕ ವೈದ್ಯಕೀಯ ವೃತಿಯನ್ನು ಎತ್ತಿಹಿಡಿದಿದರು ಎನ್ನುವುದರಲ್ಲಿ ತಪ್ಪೇನಿಲ್ಲ.

ಆಸ್ಪತ್ರೆ ವಾರ್ಡ್‌ಗಳಿಗೆ ತೆರಳಿ ವೈದ್ಯಕೀಯ ಸೇವೆಗಳನ್ನು ‍ಪರಿಶೀಲಿಸಿದ ಅವರು, ‘ನೀರು ಮತ್ತು ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಿ ಎಂದು ವೈದ್ಯಕೀಯ ಉಪ ಅಧೀಕ್ಷಕ ಡಾ.ದೀನಾನಾಥ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಅವಿನಾಶ ಜಾಧವ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್, ಬಿಜೆಪಿ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಲಿಂಗರಾಜ ಬಿರಾದಾರ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರು ಇದ್ದರು.

1 ಕಾಮೆಂಟ್

  1. ಜಾಧವ ಸಾಹೇಬರೇ ಕಾಂಗ್ರೆಸ್ ಪಕ್ಷದಲ್ಲಿ ತಮ್ಮಗೆ ಸಚಿವ ಸ್ಥಾನ ಸಿಗಲಿಲ್ಲ ಅನ್ನೋ ಕಾರಣಕ್ಕೆ ನಿಮ್ಮನ್ನು ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆದ್ದು ಬಿಜೆಪಿಗೆ ಸೇರಿದ್ದೀರಿ ಈಗ ನನ್ನಗೆ ಸಚಿವ ಸ್ಥಾನ ಸಿಗದೇ ಇರುವದಕ್ಕೆ ಬೇಜಾರು ಇಲ್ಲ ಅಂದರೆ ಕಾಂಗ್ರೆಸ್ ಪಕ್ಷದಲ್ಲಿ ಏನು ಕಡಿಮೆ ಇತ್ತು ತಮ್ಮಗೆ ??????

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here