ವಿಕಲಚೇತನರ ಪ್ರಮಾಣ ಪತ್ರ ನೀಡಲು ಹಣ ಪಡಯುತ್ತಿರುವ ಅಧಿಕಾರಗಳ ಕ್ರಮಕ್ಕೆ ಆಗ್ರಹ

0
60

ರಾಯಚೂರು: ರಿಮ್ಸ್ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ವಿಕಲಚೇತನರ ಕೊಠಡಿಯಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ವಿಕಲಚೇತನರ ಚುನರ್ವಸತಿ ಕೇಂದ್ರದ ಅಧಿಕಾರಿಗಳು ಹಣ ಪಡೆಯುತ್ತಿದ್ದು ಅವರ ಮೆಲೆ ಕ್ರಮ ಕೈಗೊಳ್ಳಬೇಕು ಎಂದು ಹೈದರಾಬಾದ್ ಕರ್ನಾಟಕ ವಿಕಲಚೇತನರ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ನೀಡಿ ನಗರದ ರಿಮ್ಸ್ ಆಸ್ಪತ್ರೆಯ ವಿಕಲಚೇತನರ ಮನರ್ವಸತಿ ಕೇಂದ್ರದ ಕೊಠಡಿಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ಕಂಪ್ಯೂಟರ್ ಆಪರೇಟರ್ ಎಂ.ಡಿ. ರಫಿ ಮತ್ತು ನೋಡಲ್ ಅಧಿಕಾರಿ ಹನುಮಂತು ಹಾಗೂ ಆನಂದ, ಚಂದು ಇವರು ವಿಕಲಚೇತನರ ವೈದ್ಯಕೀಯ ಪ್ರಮಾಣ ಪತ್ರ ನೀಡಲು ವಿಕಲ ಚೇತನರ ಬಳಿ ಹಣವನ್ನು ಪಡೆದುಕೊಂಡು ಪ್ರಮಾಣ ಪತ್ರಗಳು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ಅಧಿಕಾರಿಗಳು ಹಣ ಪಡೆದು ಯಾವುದೇ ರಸೀದಿ ನೀಡುವುದಿಲ್ಲ, ಪ್ರಮಾಣ ಪತ್ರಗಳು ನೀಡಲು ಯಾವುದೇ ಶುಲ್ಕ ತೆಗೆದುಕೊಳ್ಳಲು ಸರ್ಕಾರದ ಆದೇಶವಿದೆ.ಆದರೆ ಅಲ್ಲಿನ ಅಧಿಕಾರಿಗಳು ವೈದ್ಯ ಕೀಯ ಅಧೀಕ್ಷಕರು 200 ರೂ. ಹಣ ಪಡೆದು ಪ್ರಮಾಣ ಪತ್ರ ನೀಡಬೇಕು ಎಂದು ಹೇಳಿದ್ದಾರೆ. ಇದೇ ರೀತಿ ಸುಮಾರು ಜಿಲ್ಲೆಯಾ ದ್ಯಾದಂತ 10 ಸಾವಿರ ವಿಕಲಚೇತನರ ಪ್ರಮಾಣ ಪತ್ರ ನೀಡಿರು ತ್ತಾರೆ ಎಂದರು.

ವಿಕಲಚೇತನ ಪ್ರಮಾಣ ಪತ್ರಗಳನ್ನು ಸುಮಾರು 13 ತಿಂಗಳಿಂದ ನೀಡುತ್ತಿದ್ದಾರೆ.ಆನಂದ ಮತ್ತು ಚಂದ್ರು ಡಿ.ಡಿ.ಆರ್.ಸಿ.ಯಲ್ಲಿ ಕೆಲಸ ಮಾಡು ತ್ತಿದ್ದು ಇವರು ವಿಕಲಚೇತನ ಕೊಠಡಿಯಲ್ಲಿ ವಿಕಲಚೇತನರಿಂದ 200 ರೂ.ತೆಗೆದುಕೊಂಡು ಪ್ರಮಾಣ ನೀಡುತ್ತಿದ್ದಾರೆ.

ನೋಡಲ್ ಅಧಿಕಾರಿಗಳು ವಾರಕ್ಕೊಮ್ಮೆ ಬರುತ್ತಿದ್ದಾರೆ.ಇಲ್ಲಿ ಕೇಳುವವರು ಯಾರು ಇಲ್ಲತಾಗಿದೆ.ಕೆಲವು ವಿಕಲಚೇತನರಿಗೆ ಡಾಕ್ಟರ್‌ಗಳು ಓಪಿಡಿ ರಸೀದಿ ನೀಡಿರುವುದಿಲ್ಲ, ಅಂತಹ ವಿಕಲಚೇತನರಿಗೂ ಸಹ ಈ ಸಿಬ್ಬಂದಿಗಳು ಹಣವನ್ನು ಪಡೆದುಕೊಂಡು ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ, ಪಾಸವರ್ಡ ಕೊಟ್ಟವರು ಯಾರು ಎಂದು ಇದುವರೆಗೆ ಯಾರೂ ಹೇಳುತ್ತಿಲ್ಲ ಅಧಿಕಾರಿಗಳು ದುರ್ಭಳಕೆ ಮಾಡಿಕೊಳ್ಳುತ್ತಾರೆ ಎಂದರು.

ಈ ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಕೊಠಡಿಯಲ್ಲಿ ನೋಡಲ್ ಅಧಿಕಾರಿಗಳ ಇರುವಂತೆ ನೋಡಿಕೊಳ್ಳಬೇಕು, ಇಲಾಖೆಯ ಲಾಗ್ ಇನ್ ಪಾಸ್ ವರ್ಡ್ ದುರ್ಭಳೆಯಾಗುತ್ತಿದ್ದು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಮಹಮದ್ ಅಹ್ಮದ್ ರಫಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here