ಓದುಗರ ವೇದಿಕೆ: ಪವರ್ ಟಿವಿ ಬ್ಯಾನ್, ಸರ್ಕಾರದ ನಡೆ ಖಂಡನೀಯ

0
295

ರಾಜ್ಯದ ಮುಖ್ಯಮಂತ್ರಿಯ ಪುತ್ರನ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದಕ್ಕಾಗಿ ಕನ್ನಡದ ಸುದ್ದಿ ವಾಹಿನಿ ಬಂದ್ ಮಾಡಿಸಿರುವುದು ಖಂಡನಿಯವಾಗಿದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ.

ಮಾಧ್ಯಮವನ್ನು ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ದೇಶದಲ್ಲಿನ ಯಾವುದೆ ಸಮಸ್ಯೆ ಭ್ರಷ್ಟಾಚಾರದ ವರದಿ ಮಾಡುವ ಹಕ್ಕು ಮಾಧ್ಯಮ ಹೂಂದಿದೆ ಸಂವಿಧಾನವು ಹಕ್ಕು ಕೋಟಿದೆ ಸಮಾಜಕ್ಕೆ ಮಾಧ್ಯಮವೇನುವುದು ಕನ್ನಡಿಯಾಗಿ ತಪ್ಪು, ಸರಿ ತೋರಿಸುವ ಹಕ್ಕು ಮಾ‍ಧ್ಯಮಗಳಿಗೆ ಇದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳನ್ನು ಟೀಕಿಸುವ ಪತ್ರಕರ್ತರ ವಿರುದ್ದ ಮೊಕದ್ದಮೆ ದಾಖಲಿಸುವುದು ಹೆಚ್ಚುತ್ತಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ದ ಬರೆಯುವವರನ್ನು ಜೈಲಿಗಟ್ಟುವ ಕೆಟ್ಟ ಪದ್ದತಿ ರಾಜ್ಯದಲ್ಲಿ ಆರಂಭವಾಗಿದೆ.

Contact Your\'s Advertisement; 9902492681

ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಅವುಗಳ ಸ್ವಾತಂತ್ರ್ಯಹರಣ ಮಾಡಿದರೆ, ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತೆ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆದುಕೊಂಡಂತೆ. ಭ್ರಷ್ಟಾಚಾರದ ವಿರುದ್ದ ಹೋರಾಡುವ ಮಾದ್ಯಮಗಳಿಗೆ ಪ್ರಶಂಸೆಗಳು ವ್ಯಕ್ತವಾಗಿ, ಸಹಕಾರ ಸಿಗಬೇಕು, ಹೋರತು ಸರ್ಕಾರವೆ ಮಾಧ್ಯಮಗಳ ವಿರುದ್ದ ನಿಂತು ದುರಾಡಳಿತ ನಡೆಸುವುದು ಸರಿಯಲ್ಲ.

ಯಾರೆ ತಪ್ಪು ಮಾಡಲಿ ಶಿಕ್ಷೆಯಾಗಬೇಕು ಕಾನೂನಿನಲ್ಲಿ ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ ಆದರೆ ನೈಜ್ಯವಾಗಿ ಅನ್ಯಾಯದ ವಿರುದ್ದ ಹೋರಾಡುವರಿಗೆ ಸಾವು ಕಟ್ಟಿಟ ಬುತ್ತಿಯಂತೆ ಆಗಿದೆ. ಪ್ರಭಾವಿಗಳಿಗೊಂದು ನ್ಯಾಯ ಸಾಮಾನ್ಯರಿಗೊಂದು ಎಂಬಂತೆ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ.

ಪ್ರಭಾವಿ ವ್ಯಕ್ತಿಗಳು ಇದ್ದರು ಅಥವಾ ಸರ್ಕಾರವೆ ನಡೆಸಿದರು ನ್ಯಾಯಯುತ ಸಮಗ್ರ ಸರ್ಕಾರವೆ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ. ಆದರೆ ಇನ್ನಾದರು ಅನ್ಯಾದ ವಿರುದ್ದ ಹೋರಾಡುವರಿಗೆ ಬೇದರಿಕೆ, ಮಾಧ್ಯಮಗಳು ಬ್ಯಾನ್ ಮಾಡಿಸುವುದು ಇಂತಹ ಘಟನೆಗಳು ಮುಂದೆ ನಡಿಯದಂತೆ ನೋಡಿಕೋಳಬೇಕಿದೆ.

  • ಸಂತೋಷ ಜಾಬೀನ್ ಸುಲೇಪೇಟ
    ಸಮಾಜಿಕ ಕಾರ್ಯಕರ್ತ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here