ನೀಲೂರು ಗ್ರಾಮದಲ್ಲಿ ಸೇತುವೆ ಆಗಲೀಕರಣಕ್ಕೆ ಬೀದಿಗಿಳಿದ ಗ್ರಾಮಸ್ಥರು

0
67

ಕಲಬುರಗಿ: ಅಫಜಲಪೂರ ತಾಲೂಕಿನ ನೀಲೂರ ಗ್ರಾಮದಲ್ಲಿನ ರೈಲ್ವೆ ಟ್ರ್ಯಾಕ್ ಡಬ್ಲಿಂಗ್ ಕಾರ್ಯ ನಡೆಯುತ್ತಿದ್ದು, ಗ್ರಾಮಸ್ಥರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಕೇಳ ಸೇತುವೆಯ ಆಗಲೀಕರಣ ಮಾಡುವಂತೆ ಸಮಸ್ತ ಗ್ರಾಮಸ್ಥರು ಬೀದಿಗಿಳಿದು ಹೋರಾಟ ನಡೆಸರುವ ಘಟನೆ ಇಂದು ನಡೆಯಿತು.

ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟಪ್ರಸಂಗ ನಡೆಯಿತು. ಗ್ರಾಮದಲ್ಲಿ ಕೆಲ ಕಾಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Contact Your\'s Advertisement; 9902492681

ಗ್ರಾಮಕ್ಕೆ ಮಾರ್ಗ ಕಲ್ಪಿಸುವ ರೈಲ್ವೆ ಬ್ರಿಡ್ಜ್ ಅತ್ಯಂತ ಚಿಕ್ಕದಾಗಿ ನಿರ್ಮಿಸಿದ್ದು, ಸೇತುವೆಯಲ್ಲಿ ಕೇವಲ ಸಣ್ಣ ವಾಹನಗಳು ಮಾತ್ರ ಸಂಚರಿಸಲು ಸಾಧ್ಯವಿದ್ದು, ಕಾರ್ಹೊರತು ಪಡಿಸಿ, ಆ್ಯಂಬುಲೇನ್ಸ್ಸೇರಿದಂತೆ ಇತರೆ ದೊಡ್ಡ ಗಾತ್ರದ ವಾಹನಗಳು ಸಂಚರಿಲು ಸಾಧ್ಯವಿಲ್ಲ.

ಈ ಹಿನ್ನೆಲಯಲ್ಲಿ ಗ್ರಾಮಸ್ಥರಿಂದ ವಿರೋಧ ವ್ಯಕ್ತಪಡಿಸಿ ಇಂದು ಬೆಳಗ್ಗೆ ಗ್ರಾಮದ ಮುಖಂಡರು, ಯುವಕರು, ಮಹಳೆಯರು, ವೃದ್ದರು, ರೈತರು, ವ್ಯಾಪರಸ್ಥರು ಸೇರಿದಂತೆ ಗ್ರಾಮದ ಪ್ರತಿಯೊಬ್ಬರು ರಸ್ತೆಗೀಳಿದು ಬೃಹತ್ಪ್ರತಿಭಟನೆ ನಡೆಸಿದರು.

ಬ್ರಿಡ್ಜ್ ಅಗಲೀಕರಣ ಮಾಡಿ ಕಾಮಗಾರಿ ಮಾಡುವಂತೆ ಗ್ರಾಮಸ್ಥರ ಒತ್ತಾಯಿಸಿದರು, ಆದರೆ ಬ್ರಿಡ್ಜ್ ಅಗಲೀಕರಣ ಮಾಡದೇ ಕಾಮಗಾರಿ ಮಾಡಲು ರೈಲ್ವೆ ಇಲಾಖೆ ಮುಂದಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಬ್ರಿಡ್ಜ್ ಅಗಲೀಕರಣ ಮಾಡದೆ ಕಾಮಗಾರಿ ನಡೆಸುವಂತಿಲ್ಲ ಎಂದು ಪಟ್ಟು ಹಿಡಿದ್ದ ಗ್ರಾಮಸ್ಥರು, ರೈಲ್ವೆ ಕಾಮಗಾರಿ ನಡಯುವ ಸ್ಥಳಕ್ಕೆ ಹೋಗಿ ಕಾಮಗಾರಿ ತಡೆಯಲು ಯತ್ನಿಸಿದರು.

ವೇಳೆ ಗ್ರಾಮಸ್ಥರನ್ನು ಪೊಲೀಸರು ತಡೆದರು ಎನ್ನಲಾಗಿದ್ದು, ಇದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ವಾಗ್ವಾದ ಸಹ ನಡೆಯಿತು. ಇಡೀ ಗ್ರಾಮದಲ್ಲಿ ಬಿಗುವಿವ ವಾತಾವರಣ ನಿರ್ಮಾಣವಾಗಿತ್ತು.

ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಬೆಳಗ್ಗೆಯಿಂದಲೇ ಎಲ್ಲ ತರಹದ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಕೆಎಸ್ಆರ್ಪಿ ತುಕಡಿಗಳು,ಇದೀಗ ನೀಲೂರ ಗ್ರಾಮದಲ್ಲಿಯೇ ಠಿಕಾಣಿಯನ್ನು ಹೂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here