ಭೋವಿ ಸಮಾಜದ ರುದ್ರಭೂಮಿಯ ಕಪೌಂಡ ಗೋಡೆ ಮಾಡಿಕೊಡಬೇಕೆಂದು ಆಗ್ರಹಿಸಿ ಮನವಿ

0
124

ಶಹಾಬಾದ:ನಗರದ ಅಜನಿ ಹಳ್ಳದಲ್ಲಿ ಉಂಟಾದ ಪ್ರವಾಹದಿಂದ ಭೋವಿ ವಡ್ಡರ್ ಸಮಾಜದ ರುದ್ರಭುಮಿಯ ಸುತ್ತು ಗೋಡೆ (ಕಪೌಂಡ ) ಹಾಗೂ ಗೇಟನ್ ಕುಸಿದು ಬಿದ್ದಿದ್ದು, ಅದರ ಪುನರ್ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿ ಭೋವಿ ವಡ್ಡರ್ ಸಮಾಜದ ಉಪಾಧ್ಯಕ್ಷ ಅನೀಲ ಬೋರಗಾಂವಕರ್ ನೇತೃತ್ವದಲ್ಲಿ ಸಮಾಜದ ಮುಖಂಡರು ನಗರಸಭೆಯ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭೋವಿ ವಡ್ಡರ್ ಸಮಾಜದ ಉಪಾಧ್ಯಕ್ಷ ಅನೀಲ ಬೋರಗಾಂವಕರ್ ನಗರದಲ್ಲಿ ಇತ್ತಿಚ್ಚಿಗೆ ಸುರಿದ ಭಾರಿ ಮಳೆಯಿಂದ ಅಜನಿ ಹಳ್ಳದಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿ ಭೋವಿ ಸಮಾಜದ ರುದ್ರಭೂಮಿಯ ಸರಿ ಸುಮಾರು 500ರಿಂದ 600 ಮೀಟರ್ ಸುತ್ತು ಗೋಡೆ ಹಾಗೂ ಕಬ್ಬಿಣದ ಗ್ರೀಲ್ ಗೇಟ್ ಸಂಪೂರ್ಣ ಹಾಳಾಗಿ ಹೋಗಿದೆ.ಅಲ್ಲದೇ 500ಕ್ಕೂ ಹೆಚ್ಚು ಗಿಡಗಳನ್ನು ಹಚ್ಚಲಾಗಿತ್ತು.ಅದರಲ್ಲಿ ಅರ್ಧದಷ್ಟು ಗಿಡಗಳು ಪ್ರವಾಹಕ್ಕೆ ಕಿತ್ತುಕೊಂಡು ಹೋಗಿದೆ. ಆದ್ದರಿಂದ ಕುಸಿದು ಬಿದ್ದಿರುವ ಸುತ್ತು ಗೋಡೆ ಹಾಗೂ ಮುಖ್ಯಧ್ವಾರದ ಗೇಟ್ ನಿರ್ಮಾಣಕ್ಕೆ ನೆರ ಪರಿಹಾರದ ಅನುದಾನದಲ್ಲಿ ಪುನರ್ ನಿರ್ಮಾಣ ಮಾಡಲು ಅನುದಾನ ಬಿಡುಗಡೆಗೊಳಿಸಿ, ಸುತ್ತುಗೋಡೆ, ಗೇಟ್ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಸಮಾಜದ ಮುಖಂಡರಾದ ದೇವದಾಸ ಜಾಧವ, ಶಣಕರ ಕುಸಾಳೆ,ರಾಮು ಕುಸಾಳೆ,ತಿರುಮಲ ದೇವಕರ್,ಸಂಜಯ ವಿಟಕರ್, ದಶರಥ ದೇಸಾಯಿ,ದುರ್ಗಣ್ಣ ಕುಸಾಳೆ, ದೀಪಕ ಚೌಧರಿ,ತಿಮ್ಮಯ್ಯ ಮಾನೆ, ವೆಂಕಟೇಶ ಪವಾರ,ದುರ್ಗಪ್ಪ ಪವಾರ,ರಾಜು ದಂಡಗುಲಕರ್,ಶ್ರೀನಿವಾಸ ನೇದಲಗಿ, ಸಾಬು ದೊತ್ರೆ, ರಾಮು ನಿಡಗುಂದಿ, ಭೀಮರಾವ ಕುಸಾಳೆ,ತಿಮ್ಮಣ್ಣ ದೇವಕರ್, ಕಳೊಳ್ಳಿ ಕುಸಾಳೆ, ಸಂಜಯ ಕುಸಾಳೆ ಸೇರಿದಂತೆ ಅನೇಕ ಜನರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here