ಕಲಬುರಗಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಲಾಲ ಬಹಾದ್ದೂರ ಶಾಸ್ತ್ರಿ ಅವರು ಬೆರೆತು ಬಾಳುವ ಭಾರತಕ್ಕೆ ಬುನಾದಿಯಾಗಿದ್ದಾರೆಂದು ವಾಡಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿನ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನೂರು ವರ್ಷ ಗಳ ಹಿಂದೆಯೇ ಭಾರತದ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆದೊಂದಿಗೆ ಗ್ರಾಮ ಸ್ವರಾಜ್ಯದಿಂದಲೇ ರಾಷ್ಟ್ರದ ಉದ್ದಾರ ಎಂಬುದನ್ನು ಸಾರಿ ಹೇಳಿದರು.
ರಾಮರಾಜ್ಯದ ಕನಸಿಗೆ ಮುನ್ನುಡಿ ಬರೆದಂತಹ ಗಾಂಧಿ ಜೀ ಒಂದು ಕಡೆ ಯಾದರೆ, ಬದುಕಿನ ಬಹು ಕಷ್ಟವನ್ನು ಬದಿಗೊತ್ತಿ ಭಾರತದ ಕಷ್ಟಕ್ಕೆ ಪ್ರಾಮಾಣಿಕತನದ ಪರಿಹಾರಕ್ಕೆ ಬದ್ದರಾಗಿ ದುರ್ಬಲ ಭಾರತ ಎಂದು ಕೂಂಡಾಡುತ್ತಿದ್ದ ಶತ್ರು ರಾಷ್ಟ್ರಗಳಿಗೆ ತಕ್ಕ ಉತ್ತರವನ್ನು ನೀಡಿ, ಅಮೇರಿಕಾದಂತಹ ರಾಷ್ಟ್ರದ ಮುಂದೆ ಬಿಗುವಂತ ಭಾರತದ ನಿರ್ಮಾಣಕ್ಕೆ ಶಾಸ್ತ್ರೀಜೀ ಮಾದರಿ ಯಾಗಿದರು. ಇಂತಹ ನಾಯಕರ ಆದರ್ಶಗಳು ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ನಿವೇದಿತಾ ದಹಿಯಾಂಡೆ,ಬಪುರಸಭೆ ಸದಸ್ಯರಾದ ಭೀಮಶಾ ಜಿರೋಳ್ಳಿ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದರು. ಮುಖಂಡರಾದ ವಿಠಲ ನಾಯಕ, ಗಿರಿಮಲ್ಲಪ್ಪ ಕಟ್ಟೀಮನಿ, ಹರಿ ಗಲಾಂಡೆ, ಕಿಶನ ಜಾಧವ, ಅಂಬದಾಸ ಜಾದವ, ಆನಂದ ಡೌಳೆ,ಬಸವರಾಜ ಕಿರಣಗಿ, ದೌವಲತರಾವ ಚಿತ್ತಾಪುರಕರ, ಲೋಕೇಶ್ ರಾಠೋಡ, ದತ್ತಾ ಖೈರೆ, ರಾಜು ಕೋಲಿ, ಸಂಗಣ್ಣ ಇಂಡಿ,ಪ್ರಕಾಶ ದಂಡೋತಿ, ಪ್ರೇಮ ತೇಲ್ಕರ್,ಮಲ್ಲಿಕಾರ್ಜುನ ವಳಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.