ಸತ್ಯ, ಅಹಿಂಸೆ, ಶಾಂತಿಯ ಮೂಲಮಂತ್ರದ ಮೂಲಕ ಜಗತ್ತಿಗೆ ಹೆಸರುವಾಸಿಯಾದವರು ಗಾಂಧೀಜಿ

0
49

ಶಹಾಬಾದ:ಸತ್ಯ, ಅಹಿಂಸೆ, ಶಾಂತಿಯ ಮೂಲಮಂತ್ರದ ಮೂಲಕ ಇಡೀ ಜಗತ್ತಿಗೆ ಹೆಸರುವಾಸಿಯಾದ ಮಹಾತ್ಮ ಗಾಂಧೀಜಿ ಹಾಗೂ ಪ್ರಾಮಾಣಿಕತೆಯ ಮೂಲಕ ಎಲ್ಲರಿಗೂ ಮಾದರಿಯಾದ ಲಾಲಾಬಹಾದ್ದೂರ್ ಶಾಸ್ತ್ರಿ ಅವರು ಈ ಭಾರತ ಕಂಡ ಮಹಾನ್ ವ್ಯಕ್ತಿಗಳು ಎಂದು ಬಿಜೆಪಿಯ ಶಹಾಬಾದ ಉಸ್ತುವಾರಿ ಭೀರಣ್ಣ ಕಲ್ಲೂರ್ ಹೇಳಿದರು .

ಅವರು ಶುಕ್ರವಾರ ನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಗಾಂಧೀ ಜಯಂತಿ ಹಾಗೂ ಲಾಲಾಬಹಾದ್ದೂರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಗಾಂಧೀಜಿಯವರು ಯಾವತ್ತಿಗೂ ಸ್ವಚ್ಛತೆ ಬಗ್ಗೆ ಒತ್ತು ನೀಡಿದವರು. ಎಲ್ಲಿ ಸ್ವಚ್ಛತೆ ಇದೆ ಅಲ್ಲಿ ದೇವರು ಇರುತ್ತಾನೆ ಎಂದು ನಂಬಿದವರು. ಪ್ರಧಾನಿ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಯೋಜನೆ ಮೂಲಕ ಮಹಾತ್ಮ ಗಾಂಧೀಜಿಯವರ ಕಂಡ ಕನಸನ್ನು ನನಸು ಮಾಡುತ್ತಿದ್ದಾರೆ.ಅವರ ಆದರ್ಶವನ್ನೇ ಅಳವಡಿಸಿಕೊಂಡು ಪ್ರಧಾನಿಯವರು ಸ್ವಚ್ಛ ಭಾರತ ಅಭಿಯಾನ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತದ ಆದೇಶವನ್ನು ನೀಡಿದ್ದಾರೆ. ಗಾಂಧೀಜಿಯವರು ತಾಳ್ಮೆ,ಸಂಯಮ ಹಾಗೂ ಬದ್ಧತೆಯಿಂದ ಈ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಹೋರಾಟ ನಡೆಸಿದರು.ಅದೇ ರೀತಿ ಪರಿಸರ ಸ್ವಚ್ಛತೆ ಕಾಪಾಡುವುದು ಸಹ ಅವರ ಮಂತ್ರವಾಗಿತ್ತು. ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಬದುಕುವುದೇ ನಾವು ಗಾಂಧೀಜಿ ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗಿದೆ ಎಂದು ಹೇಳಿದರು.
ಸಂಚಾಲಕ ಬಸವರಾಜ ಬಿರಾದಾರ ಮಾತನಾಡಿ, ಬಾಪೂಜಿ ಹಾಗೂ ಲಾಲಬಹಾದ್ದೂರ್ ಶಾಸ್ತ್ರಿ ಅವರ ಚಿಂತನೆ ಸಾರ್ವಕಾಲಿಕ ಸತ್ಯವಾಗಿರುವ ಮೌಲ್ಯವನ್ನು ಒಳಗೊಂಡಿದೆ . ಆದ್ದರಿಂದ ನಾವೆಲ್ಲರೂ ಗಾಂಧೀ ಮಾರ್ಗದಲ್ಲಿ ನಡೆದು ಆದರ್ಶರಾಗಿ ಬೆಳೆಯೋಣ ಎಂದು ಹೇಳಿದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಸೂರ್ಯಕಾಂತ ವಾರದ, ಮೋಹನ ಘಂಟ್ಲಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಜ್ಯೋತಿ ಶರ್ಮಾ,ನಾಗರಾಜ ಮೇಲಗಿರಿ, ಅರುಣ ಪಟ್ಟಣಕರ್, ಚಂದ್ರಕಾಂತ ಗೊಬ್ಬೂರಕರ್,ಅಣ್ಣಪ್ಪ ದಸ್ತಾಪೂರ, ಸದಾನಂದ ಕುಂಬಾರ, ನಿಂಗಣ್ಣ ಹುಳಗೋಳಕರ್,ಗಿರಿರಾಜ ಪವಾರ, ಮಹಾದೇವ ಗೊಬ್ಬೂರಕರ್, ಶ್ರೀಧರ ಜೋಷಿ,ಅನೀಲ ಭೋರಗಾಂವಕರ್, ಸಂಜಯ ಕೋರೆ,ವಿರೇಶ ಬಂದಳ್ಳಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here