ಕಲಬುರಗಿ: ಇಂದು ರಾಷ್ಟ್ರಾದ್ಯಂತ ಪರಮಪೂಜ್ಯ ರಾಷ್ಟ್ರಪಿತ ಶಾಂತಿಧೂತ ಮಹಾತ್ಮಗಾಂಧೀಜಿ ಯವರ 151 ನೇ ಜಯೋಂತ್ಸವ ಹಾಗೂ ಭಾರತದ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹುದ್ದೂರ ಶಾಸ್ತ್ರೀಜಿ ಯವರ 116 ನೇ ಜನ್ಮದಿನದ ಪ್ರಯುಕ್ತ ಅನನ್ಯ ಪದವಿ ಮತ್ತು ಸ್ವಾತಕೋತ್ತರ ಮಹಾವಿದ್ಯಾಲಯದ ಅಧ್ಯಕ್ಷರು, ಪ್ರಾಂಶುಪಾಲರು , ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವತಿಯಿಂದ ಜಯಂತಿ ಆಚರಿಸಲಾಯಿತು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶರಣಪ್ಪ ಬಿ ಹೊನ್ನಗೆಜ್ಜೆಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ, ಜಾತಿಭೇದ, ರೈತರ ಶೋಷಣಿ, ಹೆಣ್ಣುಮಕ್ಕಳ ಅತ್ಯಚಾರದ ಕುರಿತು ಮಾತನಾಡುತ್ತಾ ರಾಷ್ಟ್ರಪಿತರ ಅಹಿಂಸಾವಾದತ್ವ ಮತ್ತು ರಾಮರಾಜ್ಯದ ಕನಸು ನನಸಾಗುವುದು ಎಂದೋ ಎಂದು, ನಿನ್ನೆ ನಡೆದ ಅಬಲೆಯ ಪ್ರಕರಣಕ್ಕೆ ಸಂತಾಪ ಸೂಚಿಸಿದರು.
ಹಾಗೆಯೇ ಜೈ ಜವಾನ್ ಜೈ ಕಿಸಾನ್ ಎಂದು ಘೋಷಿಸಿದ ಮೃದು ಸ್ವಭಾವದ ವ್ಯಕ್ತಿಯಾದ ಮಾಜಿ ಪ್ರಧಾನಿ ಲಾಲ್ ಬಹುದ್ದೂರ ಶಾಸ್ತ್ರೀಜಿವರ ದಿಟ್ಟ ಹೆಜ್ಜೆ ನಿಷ್ಠಾವಂತ ಆಡಳಿತ ಇಂದು ಶೂನ್ಯವಾಗಿದೆ ಎಂದು ಘಂಟಾಘೋಷವಾಗಿ ಹೇಳಿದರು. ಕೊನೆಗೆ ಎಲ್ಲರಿಗೂ ಇಂತಹ ಮಹಾತ್ಮರನ್ನು ಕೇವಲ ೧೧೬, ೧೫೧, ೧೨೦ನೇ ಜನ್ಮದಿನವನ್ನು ಅಂಕಿರೂಪವಾಗಿ, ಭಾಷಣ ಮುಖಾಂತರವಾಗಿ, ತೋರಣಿಕೆಯ ಮುಖಾಂತರವಾಗಿ ಇರದೇ ಕಾರ್ಯರೂಪದಲ್ಲಿ ಮಾಡಬೇಕೆಂದು ಹೇಳಿದರು.
ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ವ್ಯಾಸಂಗದಲ್ಲಿ ಶುಲ್ಕದಲ್ಲಿ ರಿಯಾಯಿತಿ, ಹೆಚ್ಚಿನ ಆಧ್ಯತೆ, ಬಡವರಿಗೆ ಉಚಿತ ಶಿಕ್ಷಣ, ಉನ್ನತ ಅಧಿಕಾರ , ಸ್ಥಾನಮಾನವನ್ನು ಕೊಡುತ್ತಾ ಬಂದಿದ್ದು ಮುಂದೆಯೂ ಆ ಭಗವಂತನು ನನಗೆ ಧೈರ್ಯ, ಸ್ಥೈರ್ಯ ಕೊಡಲೆಂದು ಹಾಗೆಯೇ ಧರ್ಮೋ ರಕ್ಷತಿ ರಕ್ಷಿತಃ ಎಂಬ ಧೋರಣೆಯನ್ನು ಪರಿಪಾಲಿಸುತ್ತೇನೆ ಎಂದು ಹೇಳುತ್ತಾ ತಮ್ಮ ಭಾಷಣವನ್ನು ಅಂತಿಮಗೊಳಿಸಿದರು. ಈ
ಸಮಾರಂಭದಲ್ಲಿ ಮಹಾವಿದ್ಯಾಲಯದ ಆಧ್ಯಕ್ಷರಾದ ಸುಷ್ಮಾವತಿ ಸಿಬ್ಬಂದಿ ವರ್ಗದವರಾದ ರಾಜುಕುಮಾರ ಜಿರೋಳ್ಳಿ, ರಾಜೇಶ್ವರಿ ಕಿರಣಗಿ, ಈರಪ್ಪ ಇಂಡಿ , ಶಾಂತಲಾ ಮ ನಂದರಗಿ ಹಾಗೂ ಸುಜಾತಾ ದೇವನೂರಕರವರು ಉಪಸ್ಥಿತರಿದ್ದರು.