ಉ.ಪ್ರ.ಸರಕಾರ ವಜಾಗೊಳಿಸಲು ಆಗ್ರಹ

0
37

ಕಲಬುರಗಿ: ಉತ್ತರ ಪ್ರದೇಶದಲ್ಲಿನ ಸರಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ರಿಪಬ್ಲಿಕನ್ ಯೂತ್ ಫೆಡರೆಷನ್ (ರಿ) ಯುವ ಮುಖಂಡ ಶರಣು ಹೊಸಮನಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರ ರಾಷ್ಟ್ರಪತಿಯವರಿಗೆ ಮನವಿ ಮಾಡಿರುವ ಅವರು , ಉತ್ತರ ಪ್ರದೇಶದಲ್ಲಿ ನಡೆದ ಮಹಿಳೆಯರ ವಿರುದ್ಧ ಸರಣಿ ಅತ್ಯಚಾರಗಳು ಮತ್ತು ಅಪರಾಧಗಳು ಅಮಾನವೀಯವಾಗಿದ್ದು ಮತ್ತು ಈ ಅಪರಾಧಗಳನ್ನು ಪರಿಹರಿಸುವಲ್ಲಿ ಉತ್ತರ ಪ್ರದೇಶದ ಸರಕಾರ ವಿಫಲವಾಗಿರುವ ಕಾರಣ ಮತ್ತು ಕಾನೂನು ಸುವ್ಯವಸ್ಥೆ ಇಲ್ಲದ ಕಾರಣ ಈ ಸರಕಾರ ಈ ಕೂಡಲೇ ವಜಾಗೊಳಿಸಯವಂತೆ ಅವರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಬ್ರಿಟಿಷ್ ನ ಖ್ಯಾತ ಸಂವಿಧಾನ ತಜ್ಞ ವಿಲಿಯಮ್ ಈ ಬ್ಲೇಡ್ ಸ್ಟೋನ್‌ ಹೇಳಿದ ಹಾಗೆ ” ನ್ಯಾಯ ಸಿಗಲು ತಡವಾಗಿದಲ್ಲಿ ನ್ಯಾಯ ನಿರಾಕರಿಸಲಾಗಿದೆ ” ಎಂಬ ಅರ್ಥದಲ್ಲಿ ಭಾವಿಸುವಂತೆ ನಾವು ಈ ದೇಶದಲ್ಲಿನ ಬಡವರು , ದುರ್ಬಲರು ಮತ್ತು ಸಮಾಜದ ಅಂಚಿನಲ್ಲಿರುವ ಜ‌ನರ ವಿರುದ್ಧ ನಡೆದ ಘೋರ ಅಪರಾಧವನ್ನು ಖಂಡಿಸಿ ಈ ಎಲ್ಲರಿಗೂ ದೇಶದಲ್ಲಿ ನ್ಯಾಯ ಪಡೆಯುವ ಹಕ್ಕಿದೆ. ಹಾಗಾಗಿ ನಾವು ಘೋರ ಅಪರಾಧಗಳ ದುಷ್ಕರ್ಮಿಗಳಿಗೆ ಅತಿ ಅಧ್ಯತೆಯೊಂದಿಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ತಮ್ಮ ಈ ಕ್ರಮವು ವ್ಯವಸ್ಥೆಯಲ್ಲಿರುವ ಜನರು ಮತ್ತು ದುಷ್ಕರ್ಮಿಗಳಿಗೆ ಒಂದು ಪಾಠವಾಗಲೆಂದು ನಾವು ಪ್ರಾರ್ಥಿಸುತ್ತೇವೆ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here