ಸುರಪುರ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ಮನಿಷಾ ವಾಲ್ಮೀಕಿ ಎಂಬ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಹಾಗು ಕಾಮುಕರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಸುರಪುರ ಬಂದ್ ಹಾಗು ರಸ್ತೆ ತಡೆ ನಡೆಸುವುದಾಗಿ ಮುಖಂಡರು ಘೋಷಿಸಿದರು.
ನಗರದ ಟೈಲೆರ್ ಮಂಜಿಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅನೇಕ ಮುಖಂಡರು ಮಾತನಾಡಿ,ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಘಟನೆ ಮಾನವ ಸಮಾಜ ತಲೆ ತಗ್ಗಿಸುವಂತಿದೆ.ಇಂತಹ ಘಟನೆಗಳು ಉತ್ತರ ಪ್ರದೇಶದಲ್ಲಿ ಪದೆ ಪದೆ ನಡೆಯುತ್ತಿರುವುದು ಅಲ್ಲಿಯ ಸರಕಾರದ ವೈಫಲ್ಯವನ್ನು ತೋರಿಸುತ್ತದೆ,ಆದ್ದರಿಂದ ದಲಿತರ ಮೇಲಿನ ದೌರ್ಜನ್ಯಗಳಿಗೆ ನಿರ್ಲಕ್ಷ್ಯ ತೋರುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ರಾಜೀನಾಮೆ ನೀಡಬೇಕು ಮತ್ತು ಮನಿಷಾ ವಾಲ್ಮೀಕಿ ಮೇಲೆ ನಡೆದ ಅತ್ಯಾಚಾರ ಘಟನೆಗೆ ಕಾರಣರಾದವರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಮತ್ತು ದೇಶದಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೊಲೆ ದಬ್ಬಾಳಿಕೆಗಳನ್ನು ಖಂಡಿಸಿ ಇದೇ ಸೋಮವಾರ ೫ನೇ ತಾರೀಖು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯ ವರೆಗೆ ಸುರಪುರ ಸಂಪೂರ್ಣ ಬಂದ್ ಮಾಡುವ ಜೊತೆಗೆ ಅಂದು ಬೆಳಿಗ್ಗೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ವೃತ್ತದಲ್ಲಿ ರಸ್ತೆ ತಡೆಯನ್ನು ನಡೆಸಲಾಗುತ್ತಿದೆ,ಇದಕ್ಕೆ ತಾಲೂಕಿನ ಸಾರ್ವಜನಿಕರು ಹಾಗು ವ್ಯಾಪಾರಸ್ಥರು ಸಹಕರಿಸುವಂತೆ ಅವರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ರಾಮಪ್ಪ ನಾಯಕ (ಜೆಜಿ) ವೆಂಕೋಬ ದೊರೆ ಬೊಮ್ಮನಹಳ್ಳಿ ವೆಂಕಟೇಶ ಬೇಟೆಗಾರ ದೇವಿಂದ್ರಪ್ಪ ಪತ್ತಾರ ನಾಗಣ್ಣ ಕಲ್ಲದೇವನಹಳ್ಳಿ ರಾಹುಲ್ ಹುಲಿಮನಿ ಮಾಳಪ್ಪ ಕಿರದಹಳ್ಳಿ ಭೀಮರಾಯ ಸಿಂದಗೇರಿ ಶಿವಲಿಂಗ ಹಸನಾಪುರ ಅಬ್ದುಲ ಗಫೂರ ನಗನೂರಿ ಶೇಕ್ ಮಹಿಬೂಬ ಒಂಟಿ ಮೂರ್ತಿ ಬೊಮ್ಮನಹಳ್ಳಿ ದಾವುದ್ ಪಠಾಣ್ ಖಾಜಾ ಖಲೀಲ ಅಹ್ಮದ್ ಅರಕೇರಿ ಮಹ್ಮದ್ ಮೌಲಾ ಸೌದಾಗರ್ ರವಿ ನಾಯಕ ಬೈರಿಮಡ್ಡಿ ನಿಜ್ಜು ಉಸ್ತಾದ್ ಕೆಎಮ್ ಪಟೇಲ್ ತಿಪ್ಪಣ್ಣ ಶೆಳ್ಳಿಗಿ ಖಾಜಾಹುಸೇನ್ ಗುಡಗುಂಟಿ ವೀರಭದ್ರ ತಳವಾರಗೇರಾ ಶಂಕರ ಬೊಮ್ಮನಹಳ್ಳಿ ಅಬೀದ್ ಪಗಡಿ ಸೇರಿದಂತೆ ಅನೇಕರಿದ್ದರು.