ಸುರಪುರ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ತಹಸೀಲ್ ಕಚೇರಿ ಮುಂದೆ ಅನೇಕ ಮುಖಂಡರು ಸೇರಿ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದರು.
ಈ ಸಮದರ್ಭದಲ್ಲಿ ಎಬಿವಿಪಿ ವಿಭಾಗಿಯ ಸಂಚಾಲಕ ನಾಗರಾಜ ಮಕಾಶಿ ಮಾತನಾಡಿ,ಇದೇ ತಿಂಗಳು ೧೪ನೇ ತಾರೀಖು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮನಿಷಾ ವಾಲ್ಮೀಕಿ ಎಂಬ ೧೯ ವರ್ಷದ ಯುವತಿಯನ್ನು ಬಲವಂತವಾಗಿ ಹೊತ್ತೊಯ್ದ ಕೆಲವು ಕಾಮುಕರು ಆಕೆಯ ಮೇಲೆ ಅತ್ಯಾಚಾರ ನಡೆಸಿ ಯುವತಿಯ ಕಾಲು ಬೆನ್ನು ಮೂಳೆಯನ್ನು ಮುರಿದು ಹಾಕಿದ್ದರಿಂದ ಯುವತಿ ಮೃತಳಾಗಿದ್ದಾಳೆ.ಈ ಕೃತ್ಯಕ್ಕೆ ಕಾರಣರಾಗಿರುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಮುಂದೆ ಇಂತಹ ಘಟನೆಗಳು ನಡೆಯದಂತೆ ಕಠಿಣ ಕಾನೂನು ಜಾರಿ ಮಾಡಬೇಕು.ಇಲ್ಲವಾದಲ್ಲಿ ಎಬಿವಿಪಿ ರಾಷ್ಟ್ರಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಮ್‌ಸೇನಾ ತಾಲೂಕು ಅಧ್ಯಕ್ಷ ಶರಣು ನಾಯಕ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಮಾನು ನಾಯಕ ಕಲಬುರ್ಗಿ ರಾಮ್‌ಸೇನಾ ಗೌರವಾಧ್ಯಕ್ಷ ಕುಮಾರ ನಾಯಕ ರವಿಕುಮಾರ ಚಿಕ್ಕನಹಳ್ಳಿ ಪರಶುರಾಮ ಬೈಲಕುಂಟಿ ಹಣಮಂತ್ರಾಯ ದೊರೆ ಅಂಬ್ರೇಶ ಡೊಣ್ಣಿಗೇರಾ ಬಸವರಾಜ ನಾಯಕ ಬಸ್ಸು ಮೇದಾ ವೆಂಕಟೇಶ ಮಲ್ಲು ಶಖಾಪುರ ವಿಶ್ವ ದೀವಳಗುಡ್ಡ ನಾರಾಯಣ ದೇವಿಕೇರಾ ಶಿವು ಕೃಷ್ಣಾಪುರ ಶ್ರೀಕಾಂತ ದೇವು ಚಂದ್ಲಾಪುರ ದೇವು ಶೆಳ್ಳಗಿ ಕೃಷ್ಣಾ ರಂಗಂಪೇಟ ರಾಮು ದೇವಿಕೇರಾ ರಮೇಶ ಚೆನ್ನು ಗುತ್ತಿ ದಿವಳಗುಡ್ಡ ರಮೇಶ ಬೊಮ್ಮನಹಳ್ಳಿ ಇದ್ದರು.