ಸಾಲಭಾದೆಗೆ ಹೆದರಿ ದೇವಾಪುರದ ರೈತ ಆತ್ಮಹತ್ಯೆ

0
98

ಯಾದಗಿರಿ: ಸುರುಪುರ ತಾಲೂಕಿನ ದೇವಾಪುರ ಗ್ರಾಮದ ರೈತನೋರ್ವ ಸಾಲಭಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ದೇವಾಪುರ ಗ್ರಾಮದ ಪದ್ದಣ್ಣ ಕುರಿ ಇಂಗಳಗಿ (40) ಎಂಬ ರೈತ ೫ ಎಕರೆ ಜಮೀನು ಹೊಂದಿದ್ದು ಕೃಷಿಗಾಗಿ ದೇವಾಪುರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಲ್ಲಿ 1 ಲಕ್ಷ 30 ಸಾವಿರ ಹಾಗೂ 25 ಸಾವಿರ ಪ್ರತ್ಯೇಕ ಸಾಲ ಮಾಡಿದ್ದು ಜೊತೆಗೆ ಖಾಸಗಿಯವರ ಬಳಿಯಲ್ಲಿ 2ಲಕ್ಷ ಸಾಲ ಪಡೆದಿದ್ದು ಒಟ್ಟು4 ಲಕ್ಷ 55 ಸಾವಿರ ರೂಪಾಯಿಗಳ ಸಾಲದಿಂದ ಬೇಸತ್ತಿದ್ದನು ಜೊತೆಗೆ ಈ ವರ್ಷ ಮಳೆಗಾಲ ಹೆಚ್ಚಾಗಿದ್ದರಿಂದ ಹತ್ತಿ ಬೆಳೆಯು ತಂಪು ಹೆಚ್ಚಾಗಿ ಒಣಗಲಾರಂಭಿಸಿದ್ದರಿಂದ ಸಾಲ ತೀರಿಸುವುದು ಹೇಗೆಂದು ಚಿಂತಿಗೀಡಾಗಿ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾನೆ ಎಂದು ಮೃತ ರೈತನ ಪತ್ನಿ ಸುರಪುರ ಠಾಣೆಗೆ ದೂರು ಸಲ್ಲಿಸಿದ್ದಾರೆ.

Contact Your\'s Advertisement; 9902492681

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here