ಯಾದಗಿರಿ: ಶಹಾಪುರ ತಾಲ್ಲೂಕಿನ ವನದುರ್ಗಾ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಶೆಟ್ಟಿಕೇರಾ ಸೀಮಾಂತರದ ತೊಗರಿ ಹೊಲದ ನಡುವೆ ಗಾಂಜಾ ಬೆಳೆ ಬೆಳಿದಿರುವ ಬಗ್ಗೆ ಗೋಗಿ ಪೊಲೀಸ್ ಠಾಣೆಯ ಪೊಲೀಸ್ ರು ಖಚಿತ ಮಾಹಿತಿ ಆಧರಿಸಿ ಧಾಳಿ ನಡೆಸಿ 20 ಕೆ.ಜಿ 25 ಗ್ರಾಮ ಹಸಿ ಗಾಂಜಾ ಬೆಳೆ ವಶಪಡಿಸಿಕೊಂಡಿದ್ದಾರೆ.
ಇಳಗೇರ ಈರಣ್ಣಗೌಡ ರಾಮಚಂದ್ರಯ್ಯ ಕಲಾಲ (55) ಗಾಂಜಾ ಬೆಳೆ ಬೆಳೆದ ವ್ಯಕ್ತಿ ಪೊಲೀಸ್ ಧಾಳಿ ವೇಳೆ ಪರಾರಿಯಾದ ಆರೋಪಿ ಎಂದು ತಿಳಿದುಬಂದಿದ್ದು, ತನ್ನ ತೊಗರಿ ಹೊಲದಲ್ಲಿ ಸುಮಾರು 57 ಹಸಿ ಗಾಂಜಾ ಬೆಳೆ ಬೇಳೆದಿರುವುದು ಪೊಲೀಸರ ಧಾಳಿಯಿಂದ ಬೆಳಕಿಗೆ ಬಂದಿದೆ.
ಸುರಪೂರ ಡಿ.ಎಸ್.ಪಿ ಮತ್ತು ಶಹಾಪೂರ ಸಿಪಿಐ ರವರ ಮಾರ್ಗದರ್ಶನದಲ್ಲಿ ಠಾಣೆಯ ಆರಕ್ಷಕ ಉಪನಿರೀಕ್ಷರಾದ ಸೋಮಲಿಂಗ್ ಒಡೆಯರ್ ಅವರ ನೇತೃತ್ವದ ಎ.ಎಸ್.ಐ ಸಿದ್ದಣ್ಣ, ಶಂಕ್ರೆಪ್ಪ, ಮಲ್ಲಪ್ಪ, ಹಯ್ಯಾಳಪ್ಪ, ಹನುಮಂತ್ರಾಯ, ಶ್ರೀನಿವಾಸ, ಹಣಮಂತ್ರಾಯ, ನಿಂಗಪ್ಪ ಕಡ್ಲಿ, ಶರಣಗೌಡ ಸಿಬ್ಬಂದಿಗಳ ತಂಡದಿಂದ ಕಾರ್ಯಚರಣೆ ನಡೆಸಿ ಒಟ್ಟು ಅಂದಾಜು 6.5 ಲಕ್ಷದ ಮೌಲ್ಯದ ಗಾಂಜಾ ಬೆಳೆ ಜಪ್ತಿ ಮಾಡಿಕೊಂಡಿದ್ದಾರೆ.
ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.