ಕೆ.ಎಚ್.ಬಿ ಗ್ರೀನ್ ಪಾರ್ಕ್ ಅಧ್ಯಕ್ಷರಾಗಿ ಸಂಜೀವಕುಮಾರ ಶೆಟ್ಟಿ ಆಯ್ಕೆ

0
158

ಕಲಬುರಗಿ: ನಗರದ ಸಂತೋಷ ಕಾಲೋನಿಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ರವಿವಾರ  ನಡೆದ ಕೆ.ಎಚ್.ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ ಸರ್ವಾನುಮತದಿಂದ ಸಂಘದ ನೂತನ ಅದ್ಯಕ್ಷರನ್ನಾಗಿ ಸಂಜೀವಕುಮಾರ ಶೆಟ್ಟಿ, ಗೌರವಾದ್ಯಕ್ಷರಾಗಿ ನಾಗೆಂದ್ರಪ್ಪ ದಂಡೋತಿಕರ, ಉಪಾದ್ಯಕ್ಷರಾಗಿ ಬಾಲಕೃಷ್ಣ ಕುಲಕರ್ಣಿ, ಕಾರ್ಯದರ್ಶಿಯಾಗಿ ರಾಜೇಶ ನಾಗಬುಜಂಗೆ, ಸಹ ಕಾರ್ಯದರ್ಶಿಯಾಗಿ ಶ್ರೀನಿವಾಸ ಬುಜ್ಜಿ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಕಾಂತ ತಳವಾರ, ಮಂಜುನಾಥ ಬೆಳಮಗಿ, ರೇವಣಸಿದ್ದಪ್ಪ ರುದ್ರವಾಡಿ, ಶರಣು ದೇಶಟ್ಟಿ , ಸಹ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ ಹೂಗಾರ, ಖಜಾಂಚಿಯಾಗಿ ಡಿ.ವಿ ಕುಲಕರ್ಣಿ, ಕಾನೂನು ಸಲಹೆಗಾರರಾಗಿ ಹಣಮಂತ್ರಾಯ ಅಟ್ಟೂರ ನ್ಯಾಯವಾದಿಗಳು, ಮಾರ್ಗದರ್ಶಕರಾಗಿ ಲೋಕಯ್ಯ ಮಠ ಹಾಗೂ ಎಲ್ಲಾ 26 ಬ್ಲಾಕಗಳಿಗೆ ಪ್ರತ್ಯೇಕವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ಸಭೆಯನ್ನುದ್ದೇಶಿಸಿ ‌ಮಾತನಾಡಿದ ನೂತನ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಈ ಬಡಾವಣೆಯಲ್ಲಿ ಸುಮಾರು 832 ಅಪಾರ್ಟ್ಮೆಂಟ್ಗಳಿದ್ದು, ಈಗಾಗಲೇ ಸರಿ ಸುಮಾರು 400 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಈ ಬಡಾವಣೆಯ ಅಭಿವೃದ್ಧಿಗಾಗಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.

ಈ ಬಡಾವಣೆಯನ್ನು ಹೆಸರಿಗೆ ತಕ್ಕಂತೆ ಹಸಿರಿಕರಣಗೊಳಿಸುತ್ತೆನೆ. ಬಡಾವಣೆಯ ಅಭಿವೃದ್ಧಿಯಾಗಬೇಕಾದರೆ ಎಲ್ಲಾ ನಿವಾಸಿಗಳ ಮತ್ತು ಹಿರಿಯರ ಸಲಹೆ ಸಹಕಾರ ಮತ್ತು ಮಾರ್ಗದರ್ಶನ ಬಹಳ ಅತ್ಯಗತ್ಯವಾಗಿದ್ದು, “ಒಗ್ಗಟ್ಟಿನಲ್ಲಿ ಬಲವಿದೆ” ಎನ್ನುವ ಉಕ್ತಿಯಂತೆ ಬಡಾವಣೆಯ ಪ್ರತಿಯೊಬ್ಬ ನಿವಾಸಿಗಳು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಸ್ವಇಚ್ಛೆಯಿಂದ ಭಾಗವಹಿಸಿ ನಮ್ಮ ಬಡಾವಣೆಯನ್ನು ಕಲಬುರಗಿಯಲ್ಲಿ ಮಾದರಿ ಬಡಾವಣೆಯನ್ನಾಗಿ ಮಾಡೋಣ ಎಂದರು.

ಶಿವಕಾಂತ ಚಿಮ್ಮಾ ಸ್ವಾಗತಿಸಿದರು ಹಾಗೂ ವಿರೇಶ ಬೋಳಶೆಟ್ಟಿ ನರೋಣಾ ವಂದಿಸಿದರು. ನಂತರ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಈ ವೇಳೆಯಲ್ಲಿ ನಿವಾಸಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here