ಕೆಕೆಆರ್ ಡಿಬಿ ಅನುದಾನದಲ್ಲಿ ಮೂಲಸೌಕರ್ಯ ಕಾಮಗಾರಿಗೆ ಆಗ್ರಹ

0
40

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ.ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳಿಗೆ ನೀರು ನುಗ್ಗಿದೆ.ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.ಕೂಡಲೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅನುದಾನದಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಕೆಕೆಆರ್ ಡಿಬಿ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗಾಗಿ ಸ್ಥಾಪಿತವಾದ ಮಂಡಳಿಗೆ ಸರಕಾರ ವಿಶೇಷ ಅನುದಾನ ನೀಡುತ್ತ ಬಂದಿದೆ.ಆದರೆ ಸರಿಯಾದ ಕಾಲಮಿತಿ ಯೋಜನೆ ರೂಪಿಸಲಾಗದೇ ಬಂದ ಹಣ ಹಿಂತಿರುಗಿದ್ದು ದುರಂತ.ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯದಂಥ ಕೆಲಸಗಳಿಗೆ ಮಂಡಳಿ ಅನುದಾನದಡಿ ಹಣ ಬಳಿಸಿಕೊಳ್ಳಲು ಆಗಿಲ್ಲ.

Contact Your\'s Advertisement; 9902492681

ಪ್ರತಿ ಬಾರಿ ಅಧ್ಯಕ್ಷರಾದವರು ಒಂದೂ ಸಭೆ ನಡೆಸದೆ ಕೇವಲ ನಾಮಕಾವಸ್ಥೆ ಎಂಬಂತೆ ಬಿಂಬಿತವಾಗಿರುವುದರಿಂಲೇ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.ಇನ್ನೂ ಕೆಕೆಆರ್ ಡಿಬಿಗೆ ಅಧ್ಯಕ್ಷರಷ್ಟೇ ನೇಮಕಗೊಳ್ಳುತ್ತಾರೆ. ಸದಸ್ಯರಿಲ್ಲದೆ ಅವಧಿ ಮೂಗಿಸಿದ್ದು ನಾಚಿಕೆ ಪಡುವ ವಿಚಾರವಾಗಿದೆ. ಕೂಡಲೇ ಸರಕಾರ ಪರಿಣಿತರನ್ನು ಸದಸ್ಯರನ್ನಾಗಿ ನೇಮಿಸಬೇಕು ಒತ್ತಾಯಿಸಿದ್ದಾರೆ.

ಇನ್ನು ಅಭಿವೃದ್ಧಿ ಬಗ್ಗೆ ಮಂಡಳಿ ಕೊಡುಗೆ ಕಡಿಮೆ ಎಂದರೆ ತಪ್ಪಾಗಲಾರದು.ಈಗಾಗಲೇ ಭಾರಿ ಮಳೆಯಿಂದ ನಗರದಲ್ಲಿ ಮನೆಗಳಿಗೆ, ಉದ್ಯಾನವನಗಳಲ್ಲಿ ನೀರು ನುಗ್ಗಿದೆ.ಕೆಲವು ಕಡೆ ಖಾಲಿ ನಿವೇಶನಗಳಲ್ಲಿ ನೀರು ನಿಂತು ಕೆರೆಗಳಾಗಿವೆ.ಆದರೂ ಮಹಾನಗರ ಪಾಲಿಕೆಯು ಅನುದಾನದ ಕೊರತೆಯಿಂದ ಮೌನವಾಗಿದೆ.ಅದ್ದರಿಂದ ಈಗಲಾದರೂ ಕೆಕೆಆರ್ ಡಿಬಿ ಅನುದಾನದಲ್ಲಿ ರಸ್ತೆಗಳ ನಿರ್ಮಾಣ, ಚರಂಡಿಗಳ ನಿರ್ಮಾಣವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here