ಕಲಬುರಗಿ: ಎಚ್‌ಕೆಆರ್‌ಡಿಬಿ ಮ್ಯಾಕ್ರೊ(ಎಸ್‌ಡಿಪಿ) ಯೋಜನೆ ಅಡಿ ನಗರದ ವಾರ್ಡ್ ನಂ.54 ರ ಹೌಸಿಂಗ್ ಬೋರ್ಡ್ ಕಾಲೊನಿಯ ಕಲಬುರಗಿ ಕಡಾಯಿಂದ ಕೆಹೆಚ್‌ಬಿ ಕಾಲೋನಿ ವರೆಗೆ ರೂ.2 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಚಾಲನೆ ನೀಡಿದರು.
ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ವಾಹನ ಸವಾರರಿಗೂ ಅನುಕೂಲವಾಗಲಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಶಿವು ಸ್ವಾಮಿ, ಸುರಜ್ ತಿವಾರಿ, ಎಇಇ ಮಾಣಿಕ ಕಣಕಟ್ಟಿ, ಎಇ ಕಾಳಪ್ಪ, ಭಿಮಶೇನರಾವ ಕುಲಕರ್ಣಿ, ರಮೇಶ ಹರವಾಳಕರ್, ರಜನಿಕಾಂತ ಬುರಲಿ, , ಅಭಿಷೇಕ ದತ್ತು, ಪುರುಷೋತ್ತಮ ಕುಲಕರ್ಣಿ, ಭೀಮಣಗೌಡ್ರು, ಪ್ರಶಾಂತ ಅಗ್ನಿಹೋತ್ರಿ, ನೀಖಿಲ ಅಗ್ನಿಹೋತ್ರಿ, ಶಾಮ ಸಿಂಗ್, ನಸಿರೋದ್ದಿನ್ ಶೇಖ್, ಶಿವಕುಮಾರ, ಅಪ್ಪಾಸಾಬ ಪಾಟಿಲ್ ಗೋಬ್ಬುರ, ರಾಜು ದೇವದುರ್ಗ, ಸಿದ್ದು ಪಾಟೀಲ್, ಶಾಂತು ದುದನಿ, ಶ್ರೀನಿವಾಸ ದೇಸಾಯಿ, ಗುತ್ತೇದಾರ ಅನೀಲ ಪ್ರಸಾದ ಪಾಂಡೆ ಇದ್ದರು.