ಕಲಬುರಗಿ: ಸಂಸದ ಡಾ. ಉಮೇಶ ಜಾಧವ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಪ್ರಥಮ ಬಾರಿಗೆ ಕಲಬುರಗಿಗೆ ಆಗಮಿಸಿದ ಅವರು ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಸಮಾದಿಗೆ ತೆರಳಿ ಪುಷ್ಪ ಅರ್ಪಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭಲ್ಲಿ ಅಬ್ದುಲ್ ಜಬ್ಬಾರ್ ಸಾಗರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.