ಕಲಬುರಗಿ: ಸಾಹಿತ್ಯ ಸಾರಥಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯಿಕ ಪತ್ರಿಕೆಯ ಮೂರನೇಯ ವರ್ಷದ ಸಂಭ್ರಮ ಹಾಗೂ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದು ಪತ್ರಿಕೆಯ ಸಂಪಾದಕರಾದ ಬಿ.ಎಚ್.ನಿರಗುಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸಾಹಿತ್ಯ ಸಾರಥಿ ಪ್ರಶಸ್ತಿಗೆ 12 ಜನರನ್ನು ಆಯ್ಕೆ ಮಾಡಲಾಗಿದೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶಿವರಾಯ ದೊಡ್ಡಮನಿ, ಶೇಷಮೂರ್ತಿ ಅವಧಾನಿ, ಸಾಹಿತ್ಯ ಕ್ಷೇತ್ರದಲ್ಲಿ ಸಿದ್ದರಾಮ್ ಹೊನ್ನಕಲ್, ಸಂದ್ಯಾ ಹೊನಗುಂಟಿಕರ್,ಡಾ.ನಾಗೇಂದ್ರ ಮಸೂತಿ, ರಂಗಭೂಮಿ ಕ್ಷೇತ್ರದಲ್ಲಿ ಶ್ರೀ ಎಸ್.ಎನ್.ದಂಡಿನಕುಮಾರ, ಸಾಮಾಜಿಕ ಹೋರಾಟದಲ್ಲಿ ಕೆ. ನೀಲಾ, ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಚನ್ನಾರೆಡ್ಡಿ ಪಾಟೀಲ್,ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಪಿ.ಎಂ.ಮಠ,ಸಂಗೀತ ಕ್ಷೇತ್ರದಲ್ಲಿ ಪ್ರೊ. ಮಹೇಶಕುಮಾರ ಬಡಿಗೇರ, ಚಿತ್ರಕಲೆ ಕ್ಷೇತ್ರದಲ್ಲಿ ಮಹಮದ್ ಅಯಾಜುದ್ದೀನ್ ಹಾಗೂ ಪುಸ್ತಕ ಪ್ರಕಾಶನಈ ಕ್ಷೇತ್ರದಲ್ಲಿ ಡಾ.ಎಚ್.ಎಸ್.ಬೇನಾಳ ಇವರನ್ನ ಪ್ರಶಸ್ತಿ ಆಯ್ಕೆ ಸಮಿತಿ ಇವರೆಲ್ಲರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯು ಪ್ರಮಾಣ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿರುತ್ತದ್ದು,. ಈ ಸಮಾರಂಭಕ್ಕೆ ನಾಡಿನ ಖ್ಯಾತ ಕಾದಂಬರಿಕಾರರಾದ ಕುಂ.ವೀರಭದ್ರಪ್ಪ ಆಗಮಿಸಲಿದ್ದಾರೆಂದು ತಿಳಿಸಿದ್ದಾರೆ.