ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧುವಾರ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಐತಿಹಾಸಿಕ ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡುತ್ತಿರುವ ಝಿ ಕನ್ನಡ ವಾಹಿನಿಯ ನಿರ್ದೇಶಕ ರಾಘವೇಂದ್ರ ಹುಣಸೂರ ಅವರಿಗೆ ನೈತಿಕ ಬೆಂಬಲ ಹಾಗೂ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ಜರುಗಿತು.
ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗುರುಪಾಳಪ್ಪಾ ಡಿ.ನವಲಗಿರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕುರಿತು ಮಹಾನಾಯಕ ಎಂಬ ಧಾರಾವಾಹಿ ಪ್ರಸಾರ ಮಾಡುತ್ತಿರುವ ಝಿ ಕನ್ನಡ ವಾಹಿನಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಝೀ ಕನ್ನಡ ವಾಹಿನಿ ನಿರ್ದೇಶಕ ರಾಘವೇಂದ್ರ ಹುಣಸೂರ ಅವರಿಗೆ ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಕರೆ ಬರುತ್ತಿದ್ದು, ಅವರು ಕರೆಗಳಿಗೆ ಭಯಭೀತರಾಗದೆ ಧೈರ್ಯದಿಂದ ಮಹಾನಾಯಕ ಧಾರಾವಾಹಿ ಪ್ರಸಾರ ಮಾಡಬೇಕು. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಉಪಾಧ್ಯಕ್ಷ ಶಿವಪ್ಪಾ ಡಿ.ಬಿಲಗುಡಿ, ಜಿಲ್ಲಾ ಕಾರ್ಯದರ್ಶಿ ಮಡಿವಾಳಪ್ಪ ನಿಂಬರ್ಗಾ, ಹಣಮಂತ ಮಾಡಗೇರಿ, ಶ್ರೀಕಾಂತ ಶಿಂಧೆ, ನಾಗಣ್ಣ, ಸೋನುಬಾಯಿ ಶ್ರೀಂಗೆರಿ, ಸೀಮಾ ಬಿಳಾಲ, ಪ್ರಿಯದರ್ಶಿನಿ ಚಿಂಚೋಳಿ, ಇದ್ದರು.