ನಗರಸಭೆಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಜನವಿರೋಧಿಯಾಗಿದ್ದು, ಪರಿಶೀಲನೆ ಮಾಡಲು ಮನವಿ

0
90

ಶಹಾಬಾದ:ನಗರಸಭೆಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಜನವಿರೋಧಿಯಾಗಿದ್ದು, ಕೂಡಲೇ ನಗರಸಭೆಯ ಪೌರಾಯುಕ್ತರು ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಮನವಿ ಮಾಡಿಕೊಂಡಿದ್ದಾರೆ.

ಕೆಕೆಆರಡಿಬಿ ಅನುದಾನದಲ್ಲಿ ನಿರ್ಮಾಣ ಮಾಡಲಾದ ನಗರಸಭೆಯ 32 ವಾಣಿಜ್ಯ ಮಳಿಗೆಗಳನ್ನು ಅಕ್ಟೋಬರ್ 5ರಂದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬಹಿರಂಗ ಹರಾಜು ಮಾಡಲಾಗಿದೆ.ಹರಾಜು ಸಂದರ್ಭದಲ್ಲಿ ಅನ್ಯ ಸ್ಥಳೀಯ ಸಂಸ್ಥೆಗಳಲ್ಲಿ ಅನುಸರಿಸಲಾಗಿರುವ ಮಾನದಂಡಗಳನ್ನು ಇಲ್ಲಿ ಪಾಲಿಸಿಲ್ಲ.ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.ಆದರೆ ಶಹಾಬಾದ ನಗರಸಭೆಯಲ್ಲಿ ತಿಂಗಳ ಬಾಡಿಗೆ ರೂ. 6675 ರಿಂದ 21500 ರೂ ಹರಾಜಾದರೆ, ಇನ್ನೂ ಕೆಲವು ಮಳಿಗೆಗಳು 3550 ರೂ.ಯಿಂದ 35000 ರೂ. ಹಾರಾಜಿನ ಮೂಲಕ ಬಾಡಿಗೆಗೆ ಮಳಿಗೆ ಪಡೆದಿದ್ದಾರೆ. ಈಗಾಗಲೇ ನಗರದ ಎರಡು ಕಾಖರ್ಾನೆಗಳು ಬಂದ್ ಆಗಿವೆ. ಗಣಿಗಳು, ಪಾಲಿಷ್ ಉದ್ಯಮ ಬಂದ್ ಕುಂಟುತ್ತ ಸಾಗಿವೆ.ಇಲ್ಲಿನ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದು ಹೋಗಿದೆ.ಉದ್ದಿಮೆದಾರರು ವ್ಯಾಪಾರವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ.

Contact Your\'s Advertisement; 9902492681

ಇಂತಹ ಸಂದರ್ಭದಲ್ಲಿ ತಿಂಗಳ ಬಾಡಿಗೆ 20 ಸಾವಿರದಿಂದ 35 ಸಾವಿರದವರೆಗೆ ಬಾಡಿಗೆ ಹೇಗೆ ಕಟ್ಟಲು ಸಾಧ್ಯ. ಇದರಿಂದ ಬಾಡಿಗೆ ಕಟ್ಟಲು ಸಾಧ್ಯವಾಗದೇ ಮುಚ್ಚುವಂತ ಪರಿಸ್ಥಿತಿ ಬಂದೊದಗುತ್ತದೆ. ನಗರಸಭೆಯವರು ಖಾಲಿ ಮಾಡಲು ಹೋದರೆ ನ್ಯಾಯಾಲಯದ ಮೇಟ್ಟಿಲೇರಿ ನಗರಸಭೆಯ ಆದಾಯಕ್ಕೆ ಪೆಟ್ಟು ಬೀಳುತ್ತದೆ.ಅಲ್ಲದೇ ನಗರಾಭಿವೃದ್ಧಿ ಇಲಾಖೆಯ ಸುತ್ತೊಲೆಯ ವಿರುದ್ಧವಾಗಿ ನಡೆದಿರುವ ಹರಾಜು ಜನವಿರೋಧಿಯಾಗಿದೆ.ಅಲ್ಲದೇ ನಗರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ 35000ರೂ.ಯಾದರೆ ಇತರ ಖಾಸಗಿ ಅಂಗಡಿಗಳ ಬಾಡಿಗೆಯನ್ನು ಹೆಚ್ಚಳ ಮಾಡಲು ಮುಂದಾಗಿರುವುದರಿಂದ ಆತಂಕದಲ್ಲಿ ವ್ಯಾಪಾರಸ್ಥರಿದ್ದಾರೆ.ಆದ್ದರಿಂದ ಆರ್ಥಿಕ ಮುಗ್ಗಟ್ಟಿನಲ್ಲಿರುವ ನಗರದಲ್ಲಿ ಜನರ ಹಿತದ ಅನುಗುಣವಾಗಿ ಮತ್ತೊಮ್ಮೆ ಪರಿಶೀಲಿಸಬೇಕೆಂದು ಡಾ.ರಶೀದ್ ಮರ್ಚಂಟ್ ನಗರಸಭೆಯ ಪೌರಾಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here