ಸರಕಾರಿ ಆಸ್ಪತ್ರೆಯಲ್ಲಿ ಜನೌಷದಿ ಕೇಂದ್ರ ಸ್ಥಾಪನೆಗೆ ಪ್ರಧಾನಿಗೆ ಪತ್ರ

0
99
  • ಸಾಜಿದ್ ಅಲಿ

ಕಲಬುರಗಿ: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜನೌಷದಿ ಕೇಂದ್ರತೆರೆದು ಕೊರೊನಾ ಲಸಿಕೆ ವಿತರಿಸಿ ಜನರ ದುಡ್ಡು ಹಾಗೂ ದುಗುಡ ದೂರ ಮಾಡಬೇಕೆಂದು ವರ್ಲ್ಡ್ ಪೋಸ್ಟ್ ಡೇ ” ನಿಮಿತ್ತ ಪ್ರಧಾನ ಮಂತ್ರಿಗೆ ಪತ್ರ ಬರೆದು ನ್ಯಾಯವಾದಿ ಶಿವರಜ ಅಂಗಡಿ ಮನವಿ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನೌಷದಿ ಕೇಂದ್ರ ತೆರೆಯಲು ಅನುಮತಿ ಕೊರಿ 2018 ರಲ್ಲಿ ಪತ್ರ ಬರೆದ್ದಿದರು ನಂತರ ನಾನು 2019 ರಲ್ಲಿ ಸಂಬಂಧಿಸಿದ ಕಚೇರಿಯಲ್ಲಿ ಪತ್ರ ಬರೆದು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗುತ್ತಿಲ್ಲ ಎಂದರು.

Contact Your\'s Advertisement; 9902492681

ಜನರ ಔಷಧಿಗಾಗಿ ಲಕ್ಷಾಂತರ ಹಣ ಖಾಸಗಿ ಔಷಧಿ ಮಳಿಗೆಗಳು ಲೋಟಿ ಮಾಡುತ್ತಿದ್ದು, ಬಡವರಿಗೆ ಜನ ಔಷಧಿ ಕೇಂದ್ರ ತೀರ ಅಗತ್ಯ ಮತ್ತು ಜನೋಪಯೋಗಿ ಕೇಂದ್ರವಾಗಿದೆ. ಆದರೆ ಜಿಲ್ಲಾ ಸರಕಾರಿ ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆಂದು ಇ-ಮೀಡಿಯಾ ಲೈನ್ ಜೊತೆ ಮಾತನಾಡಿ ಅಸಮಧಾನ ವ್ಯಕ್ತಪಡಿಸಿದರು.

ಪ್ರಧಾನಿಗೆ ಪತ್ರ ಬರೆದು ಸಮಸ್ಯೆಗೆ ಸ್ಪಂದಿಸಲು ಮನವಿ ಮಾಡಿ ಪತ್ರ ಬರೆದಿರುವ ಬಗ್ಗೆ ದಿನ ವಿಶೇಷದ ಜೊತೆಗೆ ಜನೋಪಯೋಗಿ ಕಾರ್ಯ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here