ಕಲಬುರಗಿ: ‘ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ.’ ಎಂಬ ನಾಣ್ಣುಡಿಯಂತೆ ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯಕರ್ತವ್ಯವಾಗಿದೆ.ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
ಇದು ನಮ್ಮ ಮನೆ ಪರಿಸರದಿಂದಲೇ, ನಮ್ಮಿಂದಲೇ ಅಂದರೆ ಬಡಾವಣೆಯ ನಿವಾಸಿಗಳಿಂದಲೇ ಪ್ರಾರಂಭವಾದಾಗ ಅಭಿಯಾನಕ್ಕೆ ಸಂಪೂರ್ಣವಾಗಿ ಯಶಸ್ಸು ದೊರೆತು ನಮ್ಮ ಬಡಾವಣೆ ಹಸಿರು ನಂದನವನವಾಗುತ್ತದೆ ಎಂದು ಕೆ.ಎಚ್.ಬಿ ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಹೇಳಿದರು.
ನಗರದ ಸಂತೋಷ ಕಾಲೋನಿಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ರವಿವಾರದಂದು ಬಡಾವಣೆಯ ಯುವಕರು ಹಾಗೂ ಎಲ್ಲಾ ನಿವಾಸಿಗಳಿಂದ ಸ್ವಚ್ಚತಾ ಅಭಿಯಾನ ನೇರವರಿಸಲಾಯಿತು. ಬಡಾವಣೆಯಲ್ಲಿರುವ ಎಲ್ಲಾ ಉದ್ಯಾನವನಗಳನ್ನು ಮತ್ತು ಮುಖ್ಯರಸ್ತೆ ಬದಿಯಲ್ಲಿರುವ ಕಸವನ್ನು ಸ್ವಚ್ಛಗೊಳಿಸಲಾಯಿತು.
ಸ್ವಚ್ಛತೆ ಎಂಬುದು ಯಾರೋ ಒಬ್ಬರಿಗೆ ಅಥವಾ ಯಾವುದೋ ಒಂದು ವರ್ಗಕ್ಕೆ ಸೀಮಿತವಾದ ಕಾರ್ಯವಲ್ಲ, ಅದು ಪ್ರತಿಯೊಬ್ಬರ ಕರ್ತವ್ಯ. ಸ್ವಚ್ಛತೆಯಿಂದಿ ಜೀವನದಲ್ಲಿ ಅರೋಗ್ಯ ಮತ್ತು ಅಭಿವೃಧಿಯನ್ನು ಹೊಂದಬಹುದು ಎಂದು ಸಂಘದ ಕಾರ್ಯದರ್ಶಿ ರಾಜೇಶ ನಾಗಬುಜಂಗೆ ಹೇಳಿದರು.