ಅಬಕಾರಿ ದಾಳಿ: 212 ಗಾಂಜಾ ಗಿಡಗಳು ವಶಕ್ಕೆ

0
71

ಬೀದರ: ಬೀದರನ ಅಬಕಾರಿ ಇಲಾಖೆಯ ವಿವಿಧ ಘಟಕಗಳಿಂದ ಅಕ್ಟೋಬರ್ 8ರಂದು ವಿವಿಧೆಡೆ ಕಾರ್ಯಾಚರಣೆ ನಡೆಯಿತು.

ಹುಮನಾಬಾದ್ ವಲಯ ವ್ಯಾಪ್ತಿಯ ಚಿಟ್ಟಗುಪ್ಪ ತಾಲ್ಲೂಕಿನ ಭದ್ರಾಪುರ ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿನ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿರುವ ಭೂಮಿಯಲ್ಲಿ ತೊಗರಿ ಬೆಳೆಯ ನಡುವೆ 3 ಅಡಿ ಎತ್ತರದಿಂದ 7 ಅಡಿ ಎತ್ತರವರೆಗಿನ ಸುಮಾರು 212 ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಬುಡ ಸಮೇತ ತೆಗೆದುಹಾಕಿ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು.

Contact Your\'s Advertisement; 9902492681

ಬೀದರ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. ದಾಳಿ ವೇಳೆಯಲ್ಲಿ ಅಬಕಾರಿ ನಿರೀಕ್ಷಕರುಗಳಾದ ರವೀಂದ್ರ ಪಾಟೀಲ್, ಆನಂದ ಉಕ್ಕಲಿ, ಕೆ.ಎಸ್. ರಾಜಶೇಖರ, ಅಬಕಾರಿ ಉಪ ನಿರೀಕ್ಷಕರಾದ ಜೆಟ್ಟಪ್ಪಾ, ಸಿಬ್ಬಂದಿ ಅಬಕಾರಿ ರಕ್ಷಕರಾದ ಚಂದ್ರಕಾAತ, ಹುಷೇನ್ ಸಾಬ್,
ವಾಹನ ಚಾಲಕರಾದ ಅಬ್ದುಲ್ ಅತೀಖ್ ಮತ್ತು ಪವನ್, ಅರಣ್ಯ ರಕ್ಷಕ ಸಿದ್ದಲಿಂಗಪ್ಪ ಮತ್ತು ಗ್ರಾಮ ಲೆಕ್ಕಿಗ ಹನುಮೇಶ್ ಇದ್ದರು.

ಈ ಪ್ರಕರಣದಲ್ಲಿ 212 ಗಾಂಜಾ ಗಿಡಗಳು ಮತ್ತು ಒಂದು ಹೀರೋ ಹೊಂಡಾ ಪ್ಯಾಶನ್ ಪ್ರೋ ದ್ವಿ-ಚಕ್ರ ವಾಹನ ವಶಪಡಿಸಿಕೊಂಡಿದ್ದು, ಜಪ್ತುಪಡಿಸಿದ ಮುದ್ದೆಮಾಲೀನ ಅಂದಾಜು ಕಿಮ್ಮತ್ತು 1,00,000 ಆಗುತ್ತದೆ ಎಂದು ಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here