ಕಲಬುರಗಿ: ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 108000 ಕ್ಯುಸೆಕ್ ಮತ್ತು ವೀರ್ ಜಲಾಶಯದಿಂದ 15000 ಕ್ಯುಸೆಕ್ ಸೇರಿದಂತೆ 123000 ಕ್ಯುಸೆಕ್ ನೀರು ಭೀಮಾ ನದಿಗೆ ಬುಧವಾರ ಸಾಯಂಕಾಲ ಹರಿಬಿಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತ ಜಗನ್ನಾಥ ಹಲಿಂಗೆ ತಿಳಿಸಿದ್ದಾರೆ.
ಈ ನೀರು ಅಫಜಲಪೂರ್ ತಾಲೂಕಿನ ಸೊನ್ನ ಬ್ಯಾರೇಜಿಗೆ ಬರಲಿದೆ.
ಭೀಮಾ ಜಲಾನಯನ ಪ್ರದೇಶದಲ್ಕಿ ಹೀಗೆ ಮಳೆ ಮುಂದುವರೆದಿದ್ದಲ್ಲಿ ಮುಂದಿನ 48 ಗಂಟೆಯಲ್ಲಿ ಸುಮಾರು 2.5 ಲಕ್ಷ ಕ್ಯುಸೆಕ್ ನೀರು ಸೊನ್ನ ಬ್ಯಾರೇಜ್ ಗೆ ಬರುವ ನಿರೀಕ್ಷೆ ಇದೆ ಎಂದು ಜಗನ್ನಾಥ ಹಲಿಂಗೆ ತಿಳಿಸಿದ್ದಾರೆ.