ಆಸ್ತಿ ದಾಖಲೆಗಾಗಿ ನಡೆದ ಅಮರಣಾಂತ ಸತ್ಯಾಗ್ರಹಕ್ಕೆ ನಗರಸಭೆ ಸದಸ್ಯರ ಬೆಂಬಲ

0
46

ಸುರಪುರ: ನಗರದ ತಹಸೀಲ್ ಕಚೇರಿ ಮುಂದೆ ರಂಗಂಪೇಟೆಯ ಅಮರಣ್ಣ ಸಜ್ಜನ್ ಅವರು ತಮ್ಮ ಆಸ್ತಿ ದಾಖಲೆಗಳನ್ನು ಕೊಟ್ಟಿ ಮಾಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಹಾಗು ತಮ್ಮ ಆಸ್ತಿ ದಾಖಲೆಗಳನ್ನು ದೃಢಿಕರಿಸಿ ಕೊಡುವಂತೆ ಆಗ್ರಹಿಸಿ ಕಳೆದ ಹದಿಮೂರು ದಿನಗಳಿಂದ ನಿರಂತರವಾಗಿ ನಡೆಸುತ್ತಿರುವ ಅಮರಣಾಂತ ಧರಣಿ ಸತ್ಯಾಗ್ರಹಕ್ಕೆ ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ಬೆಂಬಲಿಸಿ ಧರಣಿಯಲ್ಲಿ ಭಾಗವಹಿಸಿದರು.

ನಿರಂತರವಾಗಿ ನಡೆದ ಧರಣಿಗೆ ಅನೇಕ ಸಂಘಟನೆಗಳು ಕೂಡ ಬೆಂಬಲಿಸಿ ಸತ್ಯಾಗ್ರಹ ನಡೆಸಿದರು ಅಧಿಕಾರಿಗಳು ಮಾತ್ರ ಇನ್ನೂ ಅವರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಧರಣಿಗೆ ಬೆಂಬಲಿಸಿ ಕುಳಿತಿದ್ದ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಬೇಸರ ವ್ಯಕ್ತಪಡಿಸಿ, ಕೂಡಲೇ ಅಧಿಕಾರಿಗಳು ಅಮರಣ್ಣ ಸಜ್ಜನ್ ಅವರ ಆಸ್ತಿ ದಾಖಲೆಗಳನ್ನು ದೃಢಿಕರಿಸಿ ನೀಡಬೇಕು ಇಲ್ಲವಾದಲ್ಲಿ ಹೋರಾಟವನ್ನು ಉಗ್ರಗೊಳಿಸಲಾಗುವುದು ಎಂದು ಎಚ್ಚಿರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಲೋಕ ಜನಶಕ್ತಿ ಪಕ್ಷದ ತಾಲೂಕು ಅಧ್ಯಕ್ಷ ಹಯ್ಯಾಳಪ್ಪ ಹೊನಕೇರಿ ದುರ್ಗಪ್ಪ ಬಡಿಗೇರ ನಾಗರಾಳ ಹಾಗು ಅಮರಣ್ಣ ಅವರ ಕುಟುಂಬಸ್ಥರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here