ಪ್ರವಾಹ ಪೀಡಿತ ಗೋಳಾ(ಕೆ) ಗ್ರಾಮಕ್ಕೆ ಶಾಸಕ ಮತ್ತಿಮಡು ಬೇಟಿ

0
102

ಶಹಾಬಾದ:ಕಾಗಿಣಾ ಹಾಗೂ ಭೀಮಾನದಿಯಿಂದ ಉಂಟಾದ ಪ್ರವಾಹದಿಂದ ಮನೆಗಳು ಜಲಾವೃತಗೊಂಡ ಗೋಳಾ (ಕೆ) ಗ್ರಾಮಕ್ಕೆ ರವಿವಾರ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಬೇಟಿ ನೀಡಿ ವೀಕ್ಷಣೆ ಮಾಡಿದರು.

ಗ್ರಾಮದಲ್ಲಿ ಪ್ರವೇಶ ಮಾಡುತ್ತಿದ್ದಂತೆ ಜನರು ಶಾಸಕರ ಸುತ್ತುವರೆದು ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು. ಶಾಸಕ ಬಸವರಾಜ ಮತ್ತಿಮಡು ಅವರು ಗ್ರಾಮದ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿ ವೀಕ್ಷಣೆ ಮಾಡಿದರು.ಅದರಲ್ಲೂ ನದಿಯ ಪ್ರವಾಹಕ್ಕೆ ಹಾನಿಯಾದ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದರು.ಅಲ್ಲದೇ ಹಾನಿಯೊಂಟಾ ಜನರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಳ್ಳಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಸೂಚಿಸಿದರು.

Contact Your\'s Advertisement; 9902492681

ನಂತರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಸರಿಯಾದ ರಸ್ತೆಯಿಲ್ಲ. ಕುಡಿಯುವ ಸರಿಯಾದ ವ್ಯವಸ್ಥೆಯಿಲ್ಲದೇ ನರಳಾಡುವಂತಾಗಿದೆ.ಪಿಡಿಓ ಗ್ರಾಮಕ್ಕೆ ಬರೋದೆಯಿಲ್ಲ. ಆನರ ಸಮಸ್ಯೆ ಹೇಳಿದರೂ ಕೇಳೋದಿಲ್ಲ.ಎಲ್ಲಾ ಗ್ರಾಮದಲ್ಲಿ ಗ್ರಾಪಂಯಿಂದ ಕಸ ಹೊಡೆದು ಸ್ವಚ್ಛಗೊಳಿಸುತ್ತಾರೆ.ಆದರೆ ನಮ್ಮ ಗ್ರಾಮದಲ್ಲಿ ನಾವು ಎಂದಿಗೂ ಕಂಡಿಲ್ಲ ಎಂದು ತಮ್ಮ ಸಮಸ್ಯೆಗಳನ್ನು ತಿಳಿಸಿದರು. ತಕ್ಷಣವೇ ಪಿಡಿಓ ಪ್ರಕಾಶ ಬಾಬು ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಚಿಕ್ಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ನಾನೇ ಬರಬೇಕೇನು ? ಕಸ ಹೊಡೆಸೋದು, ನೀರು ಸರಬರಾಜು ಮಾಡೋದು, ಕಂಟಿ ಕಡಿಸೋದು ಇವು ಮಾಡೋಕೆ ಆಗಲಲ್ಲ ಎಂದರೆ ಹೇಗೆ? ಕೂಡಲೇ ಜನರ ಮಸ್ಯೆಗಳನ್ನು ಬಗೆಹರಿಸಬೇಕೆಂದು ಕಡಕ್ ಆಗಿ ಎಚ್ಚರಿಸಿದರು. ನಂತರ ಗ್ರಾಮದಲ್ಲಿ ಗುಣಮಟ್ಟಾದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡಲು ಕ್ರೀಯಾಯೋಜನೆ ತಯ್ಯಾರಿಸಿ, ಕಾಮಗಾರಿ ಕೈಗೊಳ್ಳಿ ಎಂದು ಲೋಕೋಪಯೋಗಿ ಜೆಇ ಜಗನ್ನಾಥ ತಿಳಿಸಿದರು. ನಂತರ ಪ್ರವಾಹ ಪೀಡಿತ ಹಳೆಶಹಾದಕ್ಕೆ ಬೇಟಿ ನೀಡಲು ತೆರಳಿದರು.

ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ಮುಖಂಡರಾದ ಅಣವೀರ ಇಂಗಿನಶೆಟ್ಟಿ, ದಿವ್ಯಾ ಹಾಗರಗಿ, ವಿಜಯಕುಮಾರ ಮಾಣಿಕ್, ಭಾಗಿರಥಿ ಗುನ್ನಾಪೂರ,ರವಿ ರಾಠೋಡ, ದತ್ತಾ ಫಂಡ್, ನಿಂಗಣ್ಣ ಹುಳಗೋಳಕರ್, ಸದಾನಂದ ಕುಂಬಾರ, ನಾಗರಾಜ ಮೇಲಗಿರಿ,ಬಸವರಾಜ ಮದ್ರಕಿ,ರವಿ ಸಣತಮ, ಮರಲಿಂಗ ಗಂಗಭೋ, ಗಿರಿರಾಜ ಪವಾರ, ಸಂಜಯ ಸೂಡಿ,ಚಂದ್ರಕಾಂತ ಗೊಬ್ಬೂರಕರ್,ಡಿ.ಸಿ.ಹೊಸಮನಿ, ಮಲ್ಲಿಕಾರ್ಜುನ ಗೊಳೇದ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here