ಮುತ್ತಗಾ ಗ್ರಾಮದಲ್ಲಿ ಸಂಸದ ಜಾಧವಗೆ ಘೇರಾವ್: ಕಾರಿನಿಂದ ಕೆಳಗಿಳಿಯದೇ ಜಾಧವ ವಾಪಸ್

0
97

ಶಹಾಬಾದ: ಪ್ರವಾಹ ಪೀಡಿತ ಪ್ರದೇಶ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮಕ್ಕೆ ಸಂಸದ ಡಾ. ಉಮೇಶ್ ಜಾಧವ್ ಅವರು ರವಿವಾರ ಭೇಟಿ ನೀಡಿದ ವೇಳೆ ಗ್ರಾಮಸ್ಥರು ಸಂಸದರಿಗೆ ಘೇರಾವ್ ಹಾಕಿ ವಾಪಸ್ ಜಾವ್ ಜಾಧವ್ ಎಂದು ಘೋಷಣೆ ಕೂಗುವ ಮೂಲಕ ಅವರನ್ನು ಹಿಂದಕ್ಕೆ ಮರಳುವಂತೆ ಮಾಡಿದ ಘಟನೆ ನಡೆದಿದೆ.

ಪ್ರವಾಹಕ್ಕೆ ಒಳಗಾದ ಇಲ್ಲಿನ ಮುತ್ತಗಾ ಗ್ರಾಮಕ್ಕೆ ಭಂಕೂರ ಮಾರ್ಗವಾಗಿ ಬಂದಾಗ ಗ್ರಾಮ ಪ್ರವೇಶಿಸುತ್ತಿದ್ದಂತೆ ಗ್ರಾಮಸ್ಥರು ಸಂಸದರ ವಾಹನಕ್ಕೆ ಅಡ್ಡಗಟ್ಟಿ ಎತ್ತಿನ ಬಂಡಿ ನಿಲ್ಲಿಸಿದರು. ಯಾವುದೇ ವಾಹನಕ್ಕೆ ಮುಂದೆ ಬಿಡದೆ ವಾಪಸ್ ಜಾವ್ ಎಂದು ಘೋಷಣೆಗೆ ಕೂಗಿದರು. ವಾಡಾ ತಾಂಡಾದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳು ಕಳೆದಿದ್ದು ರಸ್ತೆ ಪೂರ್ಣಗೊಂಡಿಲ್ಲ.ಪ್ರವಾಹ ಬಂದಾಗ ಈ ಮಾರ್ಗವಾಗಿ ಗ್ರಾಮದಿಂದ ಬೇರೆ ಕಡೆ ಹೋಗಲು ಅನುಕೂಲವಾಗುತ್ತಿತ್ತು.ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾದ್ಯಂತ ಪ್ರವಾಹಕ್ಕೆ ಸಿಲುಕಿದ್ದು, ಸಂಸದರಾಗಿ ಕೇವಲ ಚಿಂಚೋಳಿ ಮೇಲೆ ಮಾತ್ರ ಪ್ರೀತಿ ತೊರಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಎಲ್ಲಾ ಹೋದ ಮೇಲೆ ಈಗ ಬಂದು ಡ್ರಾಮಾ ಮಾಡ್ತಾಯಿದ್ದೀರಾ ಎಂದು ಜಾಧವ ವಿರುದ್ಧ ಕೂಗಾಡಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಸಂಸದ ಬೆಂಗಾವಲು ಪಡೆ ಮತ್ತು ಸಂಸದರು ಪ್ರವಾಹ ಪೀಡಿತರಿಗೆ ನೆರವು ನೀಡಲು ಬಂದಿದ್ದು, ಸ್ಥಳದಲ್ಲೇ ಸಮಸ್ಯೆ ಪರಿಹಾರ ನೀಡುವುದಾಗಿ ಭರವಸೆ ನೀಡುವುದುದಾಗಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.ಆದರೂ ಪ್ರಯತ್ನ ಕೈಗೂಡಲಿಲ್ಲ. ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟರು ಗ್ರಾಮಸ್ಥರು ಮಾತ್ರ ಯಾರ ಮಾತು ಕೇಳಲಿಲ್ಲ. ಪ್ರಯತ್ನ ವಿಫಲವಾಗಿದಕ್ಕೆ ಸಂಸದರು ಕಾರಿನಿಂದ ಕೆಳಕ್ಕಿಳಯದೇ ವಾಪಸ್ ಮರಳಿದರು.

ಈ ವೇಳೆ ಗ್ರಾಮದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸಂಸದ ಮರಳಿದ ನಂತರ ಸನ್ನಿವೇಶ ಸಾಮನ್ಯಸ್ಥಿತಿಗೆ ತಲುಪಿತು ಎನ್ನಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here