ಚಿಕ್ಕಬಳ್ಳಾಪುರ : ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಆರ್ ಲತಾ ರವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಸಿ ರಮೇಶ್ ರವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಸಿ ರಮೇಶ್ ರವರ ನೇತೃತ್ವದಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು ನೌಕರರ ಗುತ್ತಿಗೆ ಪದ್ದತಿ ಎಂಬ ಜೀತ ಪದ್ದತಿಯನ್ನು ಕೈ ಬಿಡಬೇಕು. ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೆ ತರಬೇಕು. ಆಪತ್ತು ಪ್ರೋತ್ಸಾಹ ಧನ ಎಲ್ಲರಿಗೂ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆಯ ಜಿಲ್ಲಾಧ್ಯಕ್ಷರಾದ ಆರ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಆರ್ ಮಂಜುನಾಥ್, ಗೌರವಾಧ್ಯಕ್ಷರಾದ ಎನ್,ವಿ ರವಿ, ಕಾರ್ಯದರ್ಶಿ ಇರ್ಫಾನ್, ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಮಿಕರ ಘಟಕದ ಅಧ್ಯಕ್ಷರಾದ ಎಂ,ಎಸ್ ರಾಜಶೇಖರ್, ಕಾರ್ಯದರ್ಶಿ ಭರತ್, ಸಂಘಟನಾ ಕಾರ್ಯದರ್ಶಿ ಎನ್,ಪಿ ಚಿದಾನಂದ್, ಗೌರಿಬಿದನೂರು ತಾಲ್ಲೂಕು ರೈತ ಘಟಕದ ಅಧ್ಯಕ್ಷರಾದ ನಾಗಣ್ಣ, ಸುಧಾಕರ್, ವೆಂಕಟೇಶ್, ರವಿ ಕುಮಾರ್, ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.