ಬಿರುಗಾಳಿ, ಮಳೆಗೆ ಮನೆಗಳ ಪತ್ರಾಸ್ ಹಾಗೂ ಮೇವಿನ ಬಣಮೆ ನಾಶ

0
114

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಭಾರೀ ಬಿರುಗಾಳಿ, ಮಳೆಗೆ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳು ಪತ್ರಾಸ್ ಹಾಗೂ ಗೋಡೆಗಳು ಕುಸಿದು ಬಿದ್ದಿವೆ ಘಟನೆ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನು ಸುಮಾರು ಐದಕ್ಕೂ ಹೆಚ್ಚು ರೈತರ ಮೇವಿನ ಬಣವೆಗಳು ಗಾಳಿಗೆ ಹಾರಿ ಹೋಗಿದ್ದು ರೈತ ತೀವ್ರ ಕಂಗಾಲಾಗಿದ್ದಾರೆ.

Contact Your\'s Advertisement; 9902492681

ದನಗಳಿಗೆ ಮೇವಿಲ್ಲದೆ ಪರಿತಪಿಸುವಂತಾಗಿದೆ ದಲಿತರ ಓಣಿಯಲ್ಲಿ ಕೂಡ ಹೆಚ್ಚು ಮನೆಗಳು ಹಾನಿಯಾಗಿದ್ದು, ರಾತ್ರಿ ಇಡೀ ಹೊರಗಡೆ ಕಳೆದಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ಕೊಟ್ಟು ಅವರಿಗೆ ಮೂಲ ಸೌಕರ್ಯವನ್ನು ಒದಗಿಸಿ ಮತ್ತು ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಿ ದವಸ ಧಾನ್ಯಗಳು ಮತ್ತು ಮೇವನ್ನು ತಾಲ್ಲೂಕು ಆಡಳಿತ ವತಿಯಿಂದ ಒದಗಿಸಬೇಕೆಂದು, ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಜಡಿ.ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ ಬಾಗುರ. ತಾಲ್ಲೂಕು ಅಧ್ಯಕ್ಷ ಮಲ್ಲಣ್ಣ ನೀಲಹಳ್ಳಿ.ಪ್ರಾಂತ ರೈತ ಸಂಘದ ಅಧ್ಯಕ್ಷ ರವಿ ಗಡ್ಡೆಪನೊರ. ಬನ್ನಪ್ಪಗೌಡ ಚಿನ್ನಮನೂರು .ಚಂದಪ ಇಟಗಿ. ಭೀಮಣ್ಣ ಬೂದಿನಾಳ. ದೇವು ಜಡಿ .ಹಾಗೂ ಇನ್ನಿತರರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here