ಜೂ.11 ರಿಂದ ‘ಆರೋಗ್ಯ ವಿಜಯ’ ಷಟ್ ವಿಧ ಕಾರ್ಯಕ್ರಮಗಳು

0
104

ಕಲಬುರಗಿ: ವಿಶೇಷ ಸಂದರ್ಭಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ಜನರ ಹೃದಯವನ್ನು ಗೆದ್ದಿರುವ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ಹನ್ನೊಂದರ ಹೊನಲು ಹಾಗೂ ಸಂಸ್ಥಾಪಕ-ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಯವರ ಜನ್ಮಜ್ಯೋತಿಗೆ 40 ರ ಬೆಳಕು ಈ ನಿಮಿತ್ತ ಜೂನ್ 11 ರಿಂದ ಜುಲೈ 11 ರ ವರೆಗೆ ತಿಂಗಳಪರ್ಯಂತವಾಗಿ ಆರೋಗ್ಯ ವಿಜಯ (ಪರೋಪಕಾರದರಿವೇ ಪರಮಸೇವೆ) ಎಂಬ ಷಟ್ ವಿಧಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರಕುಮಾರ ಭಂಟನಳ್ಳಿ, ಗೌರವಾಧ್ಯಕ್ಷ ಶಕುಂತಲಾ ಪಾಟೀಲ ಜಾವಳಿ, ಸಂಚಾಲಕ ಪರಮೇಶ್ವರ ಶಟಕಾರ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವ ಜಗತ್ತಿನ ಸ್ವಾಸ್ಥ್ಯಕ್ಕೆ ಅರಿವಿನ ನೆರವು ಅತೀ ಮುಖ್ಯವಾಗಿದೆ. ಆಯಾ ಸಮಸ್ಯೆಗಳಿಗೆ ಆಯಾ ನಿವಾರಣೆಗಳ ವಿವರಣೆಯ ಪ್ರಸಾರ ಮಾಡುವುದು ಇಂದಿನ ತುರ್ತಾಗಿ ಪರಿಣಮಿಸಿದೆ. ಅರಿವು ಮೂಡಿಸಿಕೊಂಡ ಅನೇಕ ಪರಿಣಿತರ ಸಹಕಾರದೊಂದಿಗೆ ಪರೋಪಕಾರದರಿವೇ ಪರಮಸೇವೆ ಎಂದು ಭಾವಿಸಿ ರೂಪಿಸಿದ ಕಾರ್ಯಕ್ರಮವೇ ‘ಆರೋಗ್ಯ ವಿಜಯ’.

Contact Your\'s Advertisement; 9902492681

ಇಂತಹ ದೊಡ್ಡ ಆಲೋಚನೆಗಳಿಗೆ ಸಣ್ಣದೊಂದು ಪ್ರಯತ್ನವಿದು. ಸಮಾಜದ ವೇದಿಕೆಯಂತಿರುವ ಇಲ್ಲಿ ನ ವಿಶ್ವಜ್ಯೋತಿ ಪ್ರತಿಷ್ಠಾನಕ್ಕೆ ಹನ್ನೊಂದರ ಹೊನಲು ಹಾಗೂ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರ ಜನ್ಮಜ್ಯೋತಿಗೆ 40 ರ ಬೆಳಕಿನ ನಿಮಿತ್ಯವಾಗಿ ವಿವಿಧ ಕ್ಷೇತ್ರಗಳ ಮತ್ತು ವಿಭಿನ್ನ ವಿಷಯಗಳ ಕುರಿತು ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿವರಿಸಿದರು.

ಲೇಖಕ ಜಗನ್ನಾಥ ಎಲ್.ತರನಳ್ಳಿ ಸಂಪಾದಕತ್ವದ ‘ವಿಜಯಮುಖಿ’ ಎಂಬ ನಲ್ವತ್ತು ಪುಟಗಳ ಕೃತಿಯೊಂದನ್ನು ಸಹ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ. ನಗರದ ಶಾಲಾ ಆವರಣವೊಂದರಲ್ಲಿ ೪೦ ಸಸಿಗಳ ನೆಡುವಿಕೆ, 40 ಜನಗಳಿಂದ ರಕ್ತದಾನವೂ ಸಹ ಜರುಗಲಿದೆ.

ಜೂನ್ 11 ರಂದು ಬೆಳಗ್ಗೆ 10.30 ಕ್ಕೆ ನಗರದ ಶ್ರೀಗುರು ನಾಗಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ‘ಆರೋಗ್ಯದರಿವು’ ಕಾರ್ಯಕ್ರಮದ ದಿವ್ಯ ಸಾನಿಧ್ಯ ಚವದಾಪುರ ಹಿರೇಮಠದ ಪೂಜ್ಯ ಶ್ರೀ ರಾಜಶೇಖರ ಶಿವಾಚಾರ್ಯರು ವಹಿಸಲಿದ್ದು, ರಾಯಚೂರಿನ ಸಿಪಿಐ ದತ್ತಾತ್ರೇಯ ಕಾರ್ನಾಡ್ ಸಮಾರಂಭ ಉದ್ಘಾಟಿಸಲಿದ್ದು, ಮಕ್ಕಳ ಹಾರ್ಮೋನ್ ವಿಶೇಷ ತಜ್ಡ ಡಾ.ಕುಮಾರ ಅಂಗಡಿ ನುಡಿ ಅರಿವು ಮೂಡಿಸಲಿದ್ದಾರೆ. ಕಾಲೇಜಿನ ಮುಖ್ಯಸ್ಥ ಶಿವರಾಜ ಶೀಲವಂತ ಅಧ್ಯಕ್ಷತೆ ವಹಿಸಲಿದ್ದು, ಪ್ರಮುಖರಾದ ಚಂದ್ರಕಾಂತ ಬಿ.ಜಿ.ಪಾಟೀಲ, ಅಪ್ಪು ಕಣಕಿ, ಅನೀಲಕುಮಾರ ಪಾಟೀಲ ತೆಲ್ಕೂರ, ರಾಜೇಶ ಗುತ್ತೇದಾರ ಉಪಸ್ಥಿತರಿರುವರು.

ಜೂನ್ 15 ರಂದು ಬೆಳಗ್ಗೆ 10.30 ಕ್ಕೆ ನಗರದ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಮ್‌ಲ್ಯ ಶಿಕ್ಷಣದರಿವು’ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಚಾಲನೆ ನೀಡಲಿದ್ದಾರೆ. ಸಾಹಿತಿ-ಪತ್ರಕರ್ತ ಜಗನ್ನಾಥ ಎಲ್.ತರನಳ್ಳಿ ನುಡಿ ಅರಿವು ಮೂಡಿಸಲಿದ್ದು, ಶಾಸಕ ಎಂ.ವೈ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಡಾ.ಅರುಣಕುಮಾರ ಎಸ್.,ಪಾಟೀಲ ಕೊಡಲಹಂಗರಗಾ, ಜ್ಯೋತಿಲಕ್ಷ್ಮೀ ಸಂಜುಶೆಟ್ಟಿ, ಸಿದ್ದಣ್ಣ ಸಿಕೇದ ಕೋಳಕೂರ, ಡಾ.ವನೀತಾ ಜಾಧವ ಉಪಸ್ಥಿತರಿರುವರು.

ಜೂನ್ 20 ರಂದು ಬೆಳಗ್ಗೆ 10.30 ಕ್ಕೆ ನಗರದ ಶಕುಂತಲಾ ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ‘ಪರಿಸರ ಪ್ರೇಮದರಿವು’ ಕಾರ್ಯಕ್ರಮ ಸಾನಿಧ್ಯವನ್ನು ಗುರುಬಸವ ಬ್ರಹನ್ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದು, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಚಾಲನೆ ಕೊಡಲಿದ್ದಾರೆ. ಅರಣ್ಯಾಧಿಕಾರಿ ಡಾ.ರಮೇಶ ಮಾಳಾ ನುಡಿ ಅರಿವು ಮೂಡಿಸಲಿದ್ದು, ಶಾಂತಿ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷ ಡಾ.ಚಿದಂಬರರಾವ ಪಾಟೀಲ ಮರಗುತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಜಗದೀಶ ಮರಪಳ್ಳಿ, ಸಂದೇಶ ತಿಪ್ಪಣಪ್ಪ ಕಮಕನೂರ, ಎಸ್.ಎಂ.ಚಿಕ್ಕಮಠ ಉಪಸ್ಥಿತರಿರುವರು.

ಜೂನ್ 29 ರಂದು ಬೆಳಗ್ಗೆ 10.30 ಕ್ಕೆ ನಗರದ ಕೃಷಿ ಮಹಾವಿದ್ಯಾಲಯದಲ್ಲಿ ‘ಕೃಷಿ ಕಾವ್ಯದರಿವು’ ಕಾರ್ಯಕ್ರಮಕ್ಕೆ ಜಿಪಂನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಚಾಲನೆ ಕೊಡಲಿದ್ದು, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಆದಿನಾಥ ಹೀರಾ ನುಡಿ ಅರಿವು ಮೂಡಿಸಲಿದ್ದು, ಪ್ರಮುಖರಾದ ಅರುಣಕುಮಾರ ಕಿಣ್ಣಿ, ರಾಜಶೇಖರ ಅಲ್ಲದ, ಪರ್ವತರೆಡ್ಡಿ ಪಾಟೀಲ ಕೋಡ್ಲಾ, ಬಾಬುರಾವ ಪಾಟೀಲ, ಸತೀಶ ಅಳ್ಳೋಳ್ಳಿ, ಸಂತೋಷಕುಮಾರ ಗುಡಿಮನಿ ಉಪಸ್ಥಿತರಿರುವರು.

ಜುಲೈ 6 ರಂದು ಬೆಳಗ್ಗೆ 10.30 ಕ್ಕೆ ನಗರದ ವಿವೇಕಾನಂದ ಇನ್ಸಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಕಾಲೇಜಿನಲ್ಲಿ ‘ಅಕ್ಷರ ಮಾಧ್ಯಮದರಿವು’ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಚಾಲನೆ ಕೊಡಲಿದ್ದು, ಹಿರಿಯ ಪತ್ರಕರ್ತ-ಸಾಹಿತಿ ಪ್ರಭಾಕರ ಜೋಷಿ ನುಡಿ ಅರಿವು ಮೂಡಿಸಲಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಪ್ರವೀಣ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಪ್ರ,ಮುಖರಾದ ಭವಾನಿಸಿಂಗ್ ಠಾಕೂರ್, ಶಿವರಾಯ ದೊಡ್ಡಮನಿ, ಡಿ.ಶಿವಲಿಂಗಪ್ಪ, ಜಯತೀರ್ಥ ಕಾಗಲಕರ್, ಮಹೇಶ ಕುಲಕರ್ಣಿ ಉಪಸ್ಥಿತರಿರುವರು.

ಜುಲೈ 11 ರಂದು ಬೆಳಗ್ಗೆ 10.30 ಕ್ಕೆ ನಗರದ ನೂತನ ವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಅಂಗದಾನದರಿವು’ ಕಾರ್ಯಕ್ರಮಕ್ಕೆ ಕಾಲರಾ ನಿಯಂತ್ರಣ ತಂಡದ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಚಾಲನೆ ಕೊಡಲಿದ್ದು, ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ನುಡಿ ಅರಿವು ಮೂಡಿಸಲಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಡಾ.ವಿಜಯಕುಮಾರ ಗೋತಗಿ ಅಧ್ಯಕ್ಷತೆ ವಹಿಸಲಿದ್ದು, ಪ್ರಮುಖರಾದ ಡಾ.ರಾಜಕುಮಾರ ಪಾಟೀಲ, ಡಾ.ಎಸ್.ಎಸ್.ಕಾರಭಾರಿ, ಡಾ.ಸುಭಾಷ ಕಮಲಾಪುರೆ, ಆರತಿ ಸೂರಜ್ ತಿವಾರಿ, ಶರಣರಾಜ್ ಛಪ್ಪರಬಂದಿ, ರಾಮು ರೆಡ್ಡಿ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ ಪಾಟೀಲ ತಿಳಗೂಳ, ಸ್ವಾಗತ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಪ್ರಧಾನ ಕಾರ್ಯದರ್ಶಿ ಗೀತಾ ರಾಜು ವಾಡೇಕರ್, ಬಿ.ಎಂ.ಪಾಟೀಲ ಕಲ್ಲೂರ, ಶಿವಾನಂದ ಮಠಪತಿ, ಪ್ರಭುಲಿಂಗ ಮೂಲಗೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here