ಶಹಾಪುರ : ಪ್ರಸ್ತುತ ದಿನಮಾನಗಳಲ್ಲಿ ಕಾರ್ಮಿಕರ ಸಂಘಟನೆ ಅತ್ಯವಶ್ಯಕವಾಗಿದೆ. ಅಲ್ಲದೆ ಕಾರ್ಮಿಕರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಕಾರ್ಮಿಕ ಸಂಘಟನೆ ಸ್ಥಾಪನೆ ಅನಿವಾರ್ಯ ಎಂದು ಸಾಮಾಜಿಕ ಕಾರ್ಯಕರ್ತ ಶರಣುರಡ್ಡಿ ದೋರನಳ್ಳಿ ಹೇಳಿದರು.
ಶಹಾಪುರ ತಾಲ್ಲೂಕಿನ ಹತ್ತಿಗುಡೂರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಡಾ: ಬಾಬಾಸಾಹೇಬ ಅಂಬೇಡ್ಕರ್ ರವರ ಕೂಲಿ ಕಾರ್ಮಿಕರ ಸಂಘ ರಚಿಸಿ ಮಾತನಾಡಿದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಇದೇ ಸಂಘಟನೆ ಸಾಕ್ಷಿ ಎಲ್ಲರೂ ಒಗ್ಗಟ್ಟಿದ್ದಾಗ ಮಾತ್ರ ಹೋರಾಟದ ಫಲ ದೊರೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಘಂಟಿ,ಅಧ್ಯಕ್ಷರಾಗಿ ಅಮಾತ್ಯಪ್ಪ ಘಂಟಿ,ಕಾರ್ಯಾಧ್ಯಕ್ಷರಾಗಿ ಸಂಜುಕುಮಾರ್ ತನಕೆದಾರ, ಉಪಾಧ್ಯಕ್ಷರಾಗಿ ಭೀಮರಾವ್ ಟನಿಕೆದಾರ, ಕಾರ್ಯದರ್ಶಿಯಾಗಿ ಸಿದ್ದಪ್ಪ ಟನಿಕೇದಾರ,ಖಜಾಂಚಿಯಾಗಿ ದೇಂದ್ರಪ್ಪ ನಾಟಿಕರ್,ಸಂಸ್ಥೆಯ ಅಧ್ಯಕ್ಷರಾಗಿ ಬಸವರಾಜ ಘಂಟಿ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ತಿಪ್ಪಣ್ಣ ಕೆ.ಘಂಟಿ,ಚಂದ್ರಶೇಖರ್ ನಾಟೇಕರ್,ಗುರಪ್ಪ ಸುರಪುರ, ಭೀಮರಾಯ ಸಾಧು,ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.