ಕಲಬುರಗಿ: ಭಾರತದ ಎಕತಾ ಪುರುಷ್ಯ ಮತ್ತು ರಾಷ್ಟ್ರ ನಿರ್ಮಾಪಕ ಉಕ್ಕಿನ ಮನುಷ್ಯ ಹಾಗೂ ಸ್ವಾತಂತ್ರ ಭಾರತದ ಮೊದಲನೇ ಉಪ ಪ್ರಧಾನಿ, ದಿಟ್ಟ ಗೃಹ ಮಂತ್ರಿಗಳಾದ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಜನ್ಮದಿನದ ನಿಮಿತ್ತ ನಾಳೆ ಬೆಳಿಗ್ಗೆ 9:30ಗಂಟೆಗೆ ನಗರದ ಪಟೇಲ್ ವೃತದಲ್ಲಿ ಸರದಾರ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಗುವದು ಎಂದು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೆವೋರರವರು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರರವರು,ಕಲ್ಯಾಣ ಕರ್ನಾಟಕ ಕೃಷಿ ಮತ್ತು ಸಂಸ್ಕೃತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲರವರು, ಸಂಸದರು ಸೇರಿದಂತೆ ಜಿಲ್ಲೆಯ ಮಾನ್ಯ ಶಾಸಕರು ಹಾಜರಾಗಲಿದ್ದಾರೆಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ ಅಧಿಕಾರಿಗಳು, ಪಾಲಿಕೆ ಆಯುಕ್ತರು, ಸ್ವಾತಂತ್ರ ಹೋರಾಟಗಾರರು ,ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಮುಖಂಡರು, ವಿವಿಧ ಪಕ್ಷಗಳ, ಸಂಘ,ಸಂಘಟನೆ ಸಂಸ್ಥೆಗಳ ಮುಖಂಡರುಗಳು ಉಕ್ಕಿನ ಮನುಷ್ಯ ಸರ್ದಾರ ಪಟೇಲರ ಜನ್ಮದಿನದ ನಿಮಿತ್ಯ ಪಟೇಲ್ ವೃತದಲ್ಲಿ ಸರದಾರ ಪಟೇಲರ ಪ್ರತಿಮೆಗೆ ನಮನ ಸಲ್ಲಿಸಲು ಸರಿಯಾದ ಸಮಯಕ್ಕೆ ಹಾಜರಾಗಲು ಸಮಿತಿ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದೆ.