ಸುರಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಸನಾಪುರ ಡಿವಿಜನ್ನಿನ ಸಂಖ್ಯೆ 2ರ ಆಡಳಿತ ವ್ಯಾಪ್ತಿಯಲ್ಲಿ ನಿರ್ವಹಿಸಿರುವ ಕಾಡಾ ಕಾಮಗಾರಿಗಳು ಕಳಪೆಯಾಗಿವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಆರೋಪಿಸಿದರು.
ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಸರಕಾರ ಕೃಷ್ಣಾ ಭಾಗ್ಯ ಜಲ ನಿಗಮದ ಹಸನಾಪುರ ಡಿವಿಜನ್ ಸಂಖ್ಯೆ ೨ರ ಕಚೇರಿ ಅಡಿಯಲ್ಲಿ ಹೊಸದಾಗಿ ಕಾಡಾ ಕಾಮಗಾಅರಿ ನಿರ್ಮಿಸಿದ್ದು ಈ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ.ಅಲ್ಲದೆ ಹಿಂದೆ ಮಾಡಿದ ಕಾಡಾ ಕಾಮಗಾರಿಗಳು ಈಗ ಸಂಪೂರ್ಣ ಹಾಳಾಗಿದ್ದು,ಮುಂದೆ ರೈತರ ಜಮೀನುಗಳಿಗೆ ನೀರು ಬಾರದ ಸ್ಥಿತಿ ತಲುಪಲಿದೆ.ಆದ್ದರಿಂದ ಹಳೆ ಕಾಡಾಗಳನ್ನು ರಿಪೇರಿ ಮಾಡಿಸಬೇಕು.ಮತ್ತು ಹೊಸ ಕಾಡಾ ಕಾಮಗಾರಿಗಳಲ್ಲಿನ ಕಳಪೆ ಗುಣಮಟ್ಟವನ್ನು ತನಿಖೆ ಮಾಡಿಸಿ ತಪ್ಪಿಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ನಂತರ ಕಾಡಾ ನಿರ್ದೇಶಕರಿಗೆ ಬರೆದ ಮನವಿಯನ್ನು ತಹಸೀಲ್ ಸಿಬ್ಬಂದಿ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ಕೃಷ್ಣಾ ದಿವಾಕರ,ವೇವಪ್ಪ ದೇವರಮನಿ,ಅಂಬಣ್ಣ ವೆಂಕಟಾಪೂರ ಸೇರಿದಂತೆ ಅನೇಕರಿದ್ದರು.