ವಿದ್ಯುತ್ ಪರಿವರ್ತಕ ಅಳವಡಿಸಲು ಮಂಗಳೂರು ಗ್ರಾಮದ ಜನರ ಒತ್ತಾಯ

0
55

ಸುರಪುರ: ತಾಲ್ಲುಕಿನ ಮಂಗಳೂರು ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ(ಟಿ.ಸಿ) ಸುಟ್ಟು ಎರಡು ವಾರಗಳು ಕಳೆದರು ಟಿ.ಸಿ ಅಳವಡಿಸದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು ರಂಗಂಪೇಟೆಯ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡ ಭೀಮರಾಯ ಒಂಟೆತ್ತು ಮಾತನಾಡಿ,ಮಂಗಳೂರು ಗ್ರಾಮ ದೀನ ದಯಾಳು ಉಪಾಧ್ಯಾಯ ಯೋಜನೆಯಡಿ ಆಯ್ಕೆಯಾಗಿದ್ದು,ಗ್ರಾಮದಲ್ಲಿ ನಿರಂತರ ಜ್ಯೋತಿ ಯೊಜನೆಯಡಿ ವಿದ್ಯುತ್ ನೀಡಬೇಕು.ಆದರೆ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟು ಎರಡು ವಾರಗಳಾದರು ಜೆಸ್ಕಾಂ ಇಲಾಖೆ ಗಮನ ಹರಿಸುತ್ತಿಲ್ಲ.ಗ್ರಾಮದಲ್ಲಿ ರಾತ್ರಿಯಾದರೆ ಜನರು ತಿರುಗಾಡಲು ಭಯಪಡುವಂತಾಗಿದೆ.ಕಳ್ಳರ ಭಯವು ಗ್ರಾಮದಲ್ಲಿ ಆವರಿಸಿದೆ.ರಾತ್ರಿಯಿಡೀ ಕತ್ತಲಿನಿಂದಾಗಿ ಗ್ರಾಮದಲ್ಲಿನ ಜನರು ತೊಂದರೆ ಅನುಭವಿಸುವಂತಾಗಿದೆ.ಟಿ.ಸಿ ಅಳವಡಿಸಲು ಅನೇಕಬಾರಿ ಮನವಿ ಮಡಿದರು ಪ್ರಯೋಜನೆಯಾಗುತ್ತಿಲ್ಲ.ಇದರಿಂದ ಇಡೀ ಗ್ರಾಮದ ಜನತೆ ಬೇಸತ್ತಿದ್ದು,ಕೂಡಲೆ ಗ್ರಾಮದಲ್ಲಿ ಟಿ.ಸಿ ಅಳವಡಿಸಬೇಕು,ಇಲ್ಲವಾದರೆ ಕಚೇರಿ ಮುಂದೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದರು.

Contact Your\'s Advertisement; 9902492681

ಗ್ರಾಮದಲ್ಲಿ ದೀನ ದಯಾಳ್ ಉಪಾಧ್ಯಾಯ ಯೋಜನೆಯಡಿ ನಿರಂತರವಾಗಿ ವಿದ್ಯುತ್ ನೀಡಬೇಕಿದೆ.ಅದಕ್ಕಾಗಿ ಗ್ರಾಮದ ಅನೇಕ ಓಣಿಗಳಲ್ಲಿ ಹೊಸದಾಗಿ ವಿದ್ಯುತ್ ತಂತಿ ಅಳವಡಿಸಬೇಕು ಮತ್ತು ಅವಶ್ಯವಿರುವಕಡೆಗಳಲ್ಲಿ ಟಿ.ಸಿ ಅಳವಡಿಸಬೇಕೆಂದು ಆಗ್ರಹಿಸಿದರು.ನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಸಿರಸ್ತೆದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಹವಲ್ದಾರ,ಹುಸೇನ ಭಾಷಾ ಮಂಡಗಳ್ಳಿ,ನಾನಾಗೌಡ ಪಾಟೀಲ,ಭೀಮರಾಯ ಪೂಜಾರಿ,ಶರಣಬಸವ ಬಡಿಗೇರ,ಅಶೋಕ ವಿಭೂತಿ,ಗ್ರಾ.ಪಂ.ಅಧ್ಯಕ್ಷ ಬೀರಪ್ಪ ಕರಿಕುರಿ,ಗ್ರಾ.ಪಂ.ಸದಸ್ಯರಾದ ಮಲ್ಕಪ್ಪಗೌಡ ಪಾಟೀಲ,ಲಾಲಸಾಬ ಹಾದಿಮನಿ,ಮದನಪ್ಪ ಹವಲ್ದಾರ,ಸಿದ್ದಣ್ಣ ಸಜ್ಜನ,ಶಿವರಾಜ ಒಂಟೆತ್ತು,ನಾಗಪ್ಪ ಗದ್ದೆಗೋಳ್,ಭೀಮರಾಯ ಸಜ್ಜನ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here