ಕೊಪ್ಪಳ: 65ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ಕೊಪ್ಪಳ ಜಿಲ್ಲೆಯ ಕುಕನೂರ ಪಟ್ಟಣದ ವಿದ್ಯಾನಂದ ಗುರುಕುಲ ಪ್ರೌಢಶಾಲೆ ಶಾಲೆಯಲ್ಲಿ ನಾಡ ದೇವತೆ ತಾಯಿ ಭುವನೇಶ್ವರಿಯ ( ಭಾರತಾಂಬೆಯ) ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಪೂಜೆ ಸಲ್ಲಿಸಿದ ನಂತರ ಶಾಲೆಯ ಶಿಕ್ಷಕ ರಾಜು ಪೂಜಾರ ಮಾತನಾಡಿ ‘ಈ ನಾಡಿನ ನೆಲ, ಜಲ ಭಾಷೆ ಉಳಿಸಬೇಕಾಗಿದ್ದು ಎಲ್ಲಾ ಕನ್ನಡಿಗರ ಪ್ರಮುಖ ಕರ್ತವ್ಯವಾಗಿದೆ’ ಎಂದರು.
ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಕುವೆಂಪು, ಅ.ನ.ಕೃ, ಆಲೂರು ವೆಂಕಟರಾಯರು, ಕಡಿದಾಳ ಮಂಜಪ್ಪ ರಂಥ ಮಹನೀಯರನ್ನು ನೆನೆಪಿಸಿ ಕೊಳ್ಳುವುದು ಬಹಳ ಅವಶ್ಯಕತೆ ಎಂದು ಹೇಳಿದ್ದರು.
ಕನ್ನಡ ರಾಜ್ಯೋತ್ಸವ ಆಚರಿಸದೆ ಸಾಲದು ಅದನ್ನು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಕನ್ನಡನಾಡಿನ ಉಳಿವಿಗಾಗಿ ಎಲ್ಲರೂ ಜಾತಿ, ಧರ್ಮ, ಬೇಧ- ಭಾವ ತೊರೆದು ಕರ್ನಾಟಕವನ್ನು ಏಕೀಕರಣಗೊಳಿಸಿದ ಮಹನೀಯರು ನೆನೆದು ಮತ್ತೆ ಕನ್ನಡ ನಾಡಿನ ಉಳಿವಿಗಾಗಿ ಎಲ್ಲರೂ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು .
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿಗಳಾದ ಶ್ರೀಲತಾ ಕೆ.ವಿದ್ಯಾಪತಿ, ಉಮಾ ದೇಸಾಯಿ, ಅರುಂದತಿ ಬಟನೂರ, ಆರ್. ಎಮ್ . ದೇವರೆಡ್ಡಿ, ಮಂಜುನಾಥ್ ಲಿಂಗದಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಭೀಮಾಶಂಕರ ಪಾಣೇಗಾಂವ್,