ಕಲಬುರಗಿ: ವಿಶ್ವ ಅಹಾರ ಸುರಕ್ಷತಾ ದಿನಾಚರಣೆ ಹಾಗೂ ವಿಶ್ವ ಆಹಾರ ಸುರಕ್ಷತಾ ಪಾಕ್ಷಿಕ ಆಚರಣೆ ಹಿನ್ನೆಲೆಯಲ್ಲಿ ಆಹಾರ ತಯಾರಕರು, ವಿತರಕರು, ಸಗಟು ಮಾರಾಟಗಾರರು, ಚಿಲ್ಲರೆ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿ, ಕೆಟರಿಂಗ, ಹೋಟಲ್, ಬೆಕರಿ, ಹಾಗೂ ಇತರೆ ಅಹಾರ ಪದಾರ್ಥಗಳ ಮಾರಾಟಗಾರರಿಗೆ ಅಹಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಕಲಬುರಗಿ ಜಿಲ್ಲಾ ಅಂಕಿತ ಅಧಿಕಾರಿ ಡಾ. ದೀಪಕ ಕುಮಾರ ಸುಕೆ ತಿಳಿಸಿದರು.
ಅವರು ಶುಕ್ರವಾರ ಕಲಬುರಗಿಯ ಕೋರ್ಟ್ ರಸ್ತೆಯಲ್ಲಿರುವ ಎಸ್.ಆರ್.ಎನ್ ಮೆಹತಾ ಶಾಲೆಯಲ್ಲಿ ಅಸುರಕ್ಷಿತ ಅಹಾರ, ಅಹಾರವೆ ಅಲ್ಲ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವ ವಿಶ್ವ ಅಹಾರ ಸುರಕ್ಷತಾ ದಿನಾಚರಣೆ ಮತ್ತು ವಿಶ್ವ ಅಹಾರ ಪಾಕ್ಷಿಕ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಎಲ್ಲರೂ ಊಟ ಮಾಡುವುದಕ್ಕಿಂತ ಮುಂಚೆ ಕೈಗಳನ್ನು ಸರಿಯಾಗಿ ಸ್ವಚ್ಛವಾಗಿ ತೊಳೆಯಬೇಕು. ಕೈ ತೊಳೆಯುವ ವಿಧಾನ, ಸುರಕ್ಷಿತ ಅಹಾರ ಸೇವಿಸುವುದು, ಅಡುಗೆ ಮಾಡುವ ಕೋಣೆ ಸ್ವಚ್ಛವಾಗಿ ಇಡುವುದು, ಹಣ್ಣಗಳನ್ನು ಶುದ್ಧ ನೀರಿನಿಂದ ತೊಳೆಯುವುದು ಹಾಗೂ ಯಾವುದೇ ಪ್ಯಾಕೇಟಿನಲ್ಲಿ ಅಹಾರ ಪದಾರ್ಥಗಳನ್ನು ಖರೀದಿಸುವ ಮುಂಚೆ FSSAI Logo, FSSAI Registration, License Number, Best Before, Exp Date ಇರುವುದನ್ನು ಖಚಿತಪಡಿಸಿಕೊಂಡು ಖರೀದಿಸಬೇಕು. ಪ್ಯಾಕ್ ಹಾಳಾದ ಒಡೆದ ಇಂತಹ ಪದಾರ್ಥಗಳನ್ನು ಖರೀದಿಸಬಾರದು ಎಂದು ತಿಳಿಸಿದರು.
ವಿಭಾಗೀಯ ವಿಶ್ಲೇಷಣೆ ಅಧಿಕಾರಿ ಲೋಕೇಶ ಪೂಜಾರ ಅವರು ಮಾತನಾಡಿ ಆಹಾರದಲ್ಲಿ ಕಲಬರಿಕೆ ಮಾಡಿರುವುದನ್ನು ಮನೆಯಲ್ಲಿಯೇ ಪರಿಶೀಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯು www.fssai.gov.in ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ. ವಿಶ್ವ ಅಹಾರ ಪಾಕ್ಷಿಕ ಆಚರಣೆಯು ಜೂನ್ ೭ ರಿಂದ ೨೧ರವರೆಗೆ ೧೫ದಿನಗಳ ಕಾಲ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಹಾರ ಸುರಕ್ಷತಾ ಅಧಿಕಾರಿ ಪಿ.ಪಿ.ನಾಯಕ, ಕಿರಣಕುಮಾರ ಚಲವಾದಿ, ಮಹೇಶ ಸಿಂಗ್, ರಮೇಶ ಮತ್ತು ಸಿಬ್ಬಂದಿಗಳು ಹಾಗೂ ಎಸ್.ಆರ್.ಎನ್. ಮಹೆತಾ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.