ಶಹಾಪುರ : ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಕನ್ನಡ ಝೇಂಕರಿಸಲಿ,ಕನ್ನಡ ಎಲ್ಲರ ಮನೆ ಮಾತಾಗಿ ರಾಜ್ಯೋತ್ಸವ ಸ್ವಾಭಿಮಾನದ ಸಂಕೇತವಾಗಲಿ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.
ನಗರದ ದೇಶಮುಖ್ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕೇವಲ ನವೆಂಬರ್ ಮಾತ್ರಕ್ಕೆ ಕನ್ನಡ ರಾಜ್ಯೋತ್ಸವ ಸೀಮಿತವಾಗಿರದೆ ಹನ್ನೆರಡು ತಿಂಗಳಲ್ಲೂ ಕೂಡ ಕನ್ನಡ ಸಂಭ್ರಮ ನಡೆಯಬೇಕಾಗಿದೆ ಎಂದರು.
ಕೇವಲ ಕನ್ನಡ ಕನ್ನಡ ಎಂದು ಬಡಿದಾಡಿದರೆ ಸಾಲದು ಮೊದಲು ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ಸಲಹೆ ನೀಡಿದರು ಇದಕ್ಕೆ ಸರ್ಕಾರ ಕಾನೂನು ಕೂಡ ರೂಪಿಸಬೇಕು ಅಧಿಕಾರಿಗಳ ಮಕ್ಕಳು ಕನ್ನಡ ಶಾಲೆಯಲ್ಲೇ ವಿದ್ಯಾಭ್ಯಾಸ ಪಡೆಯುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಕನ್ನಡ ಪಂಡಿತರಾದ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರ,ಡಾ ರವೀಂದ್ರನಾಥ ಹೊಸ್ಮನಿ,ನಿವೃತ್ತ ಕನ್ನಡ ಪ್ರಾಧ್ಯಾಪಕರು ಚಾಂದ್ ಪಾಷಾ,ದೇವಿಂದ್ರಪ್ಪ ಕನ್ಯಾಕೋಳೂರ, ಹೊನ್ನಾರಡ್ಡಿಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ,ಹಾಗೂ ಇತರರು ಉಪಸ್ಥಿತರಿದ್ದರು