ಜಯಕರ್ನಾಟಕ ೬೫ನೇ ಕನ್ನಡ ರಾಜ್ಯೋತ್ಸವ ಆಚರಣೆ ತಹಸೀಲ್ದಾರ ಭಾಗಿ

0
25

ಸುರಪುರ: ಜಯಕರ್ನಾಟಕ ಸಂಘಟನೆ ವತಿಯಿಂದ ನಗರದ ತಹಸೀಲ್ ರಸ್ತೆಯ ಶರಣಬಸವ ಕೆಂಗುರಿ ವೃತ್ತದ ಸಮೀಪ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಭಾಗವಹಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಮಾತನಾಡಿ,ಇಂದು ನಾವೆಲ್ಲರು ಒಂದಾಗಿ ಇರಲು ಹಾಗು ಪರಸ್ಪರ ಸಹೋದರತೆಯನ್ನು ಹೊಂದಲು ಮುಖ್ಯ ಕಾರಣ ಭಾಷೆಯಾಗಿದೆ.ಅದರಲ್ಲಿ ನಮ್ಮ ಕನ್ನಡ ಭಾಷೆ ಜಗತ್ಪ್ರಸಿದ್ಧವಾಗಿದೆ.ಅಲ್ಲದೆ ಕನ್ನಡ ನಾಡುಕೂಡ ಭವ್ಯವಾದ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಹೊಂದಿದೆ.ಇಂತಹ ನಾಡಿನಲ್ಲಿ ನಾವೆಲ್ಲರು ಜನಸಿರುವುದು ನಮ್ಮೆಲ್ಲರ ಪುಣ್ಯವಾಗಿದೆ.ಆದ್ದರಿಂದ ಕನ್ನಡ ನಾಡು ಎಂದರೆ ನಮ್ಮ ಮನೆಯಾಗಿದೆ ಈ ಮನೆಗೆ ಯಾವುದೇ ರೀತಿಯ ತೊಂದರೆ ಬಂದಲ್ಲಿ ಅದಕ್ಕೆ ಜಯಕರ್ನಾಟಕ ಸಂಘಟನೆ ಹೋರಾಟಕ್ಕೆ ಸಿದ್ಧವಿದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಜ ನಾಯಕ ನಾಗರಾಜ ದೇಸಾಯಿ ಸಂಘಟನೆಯ ಶಣರಣಪ್ಪ ಬೈರಿಮಡ್ಡಿ ಮಲ್ಲಪ್ಪ ಶಿಬರಬಂಡಿ ಯಲ್ಲಪ್ಪ ಕಲ್ಲೋಡಿ ರಾಘವೇಂದ್ರ ಗೋಗಿಕೇರಾ ವೆಂಕಟೇಶ ಬಿಚಗತ್ತಿಕೇರಾ ಸಬೀಸಾ ಬಸವರಾಜ ಶಖಾಪುರ ದೇವು ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here