ಸುರಪುರ: ಮಹಾರಾಷ್ಟ್ರದ ಪೌರಾಗಡ ಲಿಂಗೈಕ್ಯರಾದ ಬಂಜಾರ ಸಮುದಾಯದ ಜಗದ್ಗುರು ಹಾಗು ಪೀಠಾಧಿಪತಿಗಳಾದ ಡಾ|| ರಾಮರಾವ್ ಬಾಪು ಮಹಾರಾಜ್ ಅವರ ನಿಧನಕ್ಕೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರವರು ಬಂಜಾರ ಸಮುದಾಯದ ವಿಶ್ವದ ಏಕೈಕ ಪ್ರಥಮ ಜಗದ್ಗುರುಗಳಾಗಿದ್ದರು.ಪೂಜ್ಯರು ಸಂತ ಸೇವಲಾಲರ ವಂಶದ ಕುಡಿಯಾಗಿದ್ದು ಅವರ ಪ್ರತಿರೂಪವಾಗಿದ್ದರು. ಪೂಜ್ಯರ ಅಗಲಿಕೆಯಿಂದ ಅಖಂಡ ಭಾರತ ಮತ್ತು ವಿಶಾಲ ಕರ್ನಾಟಕದ ಸಮಸ್ತ ಬಂಜಾರ ಬಂದುಗಳು ಶೋಕಸಾಗರದಲ್ಲಿ ಮುಳುಗುವಂತಾಗಿದೆ. ಭಗವಂತ ಸದಾ ನಿಮ್ಮ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸುತ್ತ ನಮ್ಮ ಕಾಂಗ್ರೆಸ್ ಪಕ್ಷದಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಪೇಕ್ಸ್ ಬ್ಯಾಂಕ್ ಬೆಂಗಳೂರು ರಾಜ್ಯ ನಿರ್ದೇಶಕ ವಿಠ್ಠಲ್ ಯದವ್ ಯುವ ಮುಖಂಡ ರಾಜಾ ವೇಣುಗೊಪಾಲ ನಾಯಕ, ಹಣಮಂತ್ರಾಯ ಮಕಾಶಿ, ವೆಂಕಟೇಶ ದಳವಾಯಿ, ತಿರುಪತಿ ಎಸ್ ಗೇದ್ದಲಮರಿ ತಾಂಡಾ, ಕೃಷ್ಣ ಹೆಚ್ ಗೇದ್ದಲಮರಿ ತಾಂಡಾ, ಬಸವರಾಜ ಬೋನ್ಹಾಳ ಕನ್ನೇಳ್ಳಿ, ಈರಣ್ಣ ಕುಂಬಾರ ಕನ್ನೇಳ್ಳಿ, ಮಲ್ಕಪ್ಪ ದೊರಿ ಕನ್ನೇಳ್ಳಿ, ಗಣೇಶ ಡ್ರೈವರ, ದಾನಪ್ಪ ಲಕ್ಷ್ಮೀಪುರ, ಚಂದಪ್ಪ ದೊರಿ ಕನ್ನೇಳ್ಳಿ, ರಾಘವೇಂದ್ರ ಯನಗುಂಟಿ ಕನ್ನೇಳ್ಳಿ, ನಿಂಗಪ್ಪ ಕನ್ನೇಳ್ಳಿ, ಇನ್ನಿತರರು ಉಪಸ್ಥಿತರಿದ್ದವರು,