ಕಲಬುರಗಿ: ಪ್ರಸ್ತಕ 2019ನೇ ಶೈಕ್ಷಣಿಕ ಸಾಲಿಗಾಗಿ ಕಲಬುರಗಿ ಜಿಲ್ಲೆಯಲ್ಲಿನ 12 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು 09 ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಮೇರಿಟ್-ಕಂ-ರಿಸರ್ವೇಷನ್ ಆಧಾರಿತ) ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಸ್.ಎಸ್.ಪಂಚಾಳ ಅವರು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ www.emptrg.kar.nic.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ೨೦೧೯ರ ಜೂನ್ ೧೫ರ ರೊಳಗಾಗಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳ ವಯೋಮಿತಿ 2019ರ ಆಗಸ್ಟ್ 1ಕ್ಕೆ 14 ವರ್ಷ ಮೇಲ್ಪಟ್ಟಿರಬೇಕು.
ಸರ್ಕಾರಿ ಐ.ಟಿ.ಐ ಸಂಸ್ಥೆಗಳ ವಿವರ ಇಂತಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ ಮತ್ತು ಮಹಿಳಾ) ಕಲಬುರಗಿ, ವಾಡಿ, ಜೇವರ್ಗಿ, ಚಿಂಚೋಳಿ, ಚಿತ್ತಾಪುರ, ಸೇಡಂ, ಆಳಂದ, ಅಫಜಲಪುರ, ಸ್ಟೇಷನ್ ಗಾಣಗಾಪುರ, ಶಹಾಬಾದ, ಕೊಂಚಾವರಂ. ಅನುದಾನಿತ ಖಾಸಗಿ ಸಂಸ್ಥೆಗಳ ವಿವರ:- ಪ್ರೋ.ಪಿ.ಎಸ್.ಚೌಧರಿ, ಹೆಚ್.ಕೆ.ಇ.ಎಸ್. ಕೈಗಾರಿಕಾ ತರಬೇತಿ ಸಂಸ್ಥೆ ಕಲಬುರಗಿ, ಹೆಚ್.ಕೆ.ಇ.ಎಸ್ ಕೈಗಾರಿಕಾ ತರಬೇತಿ ಸಂಸ್ಥೆ ಕಮಲಾಪೂರ, ಹೆಚ್.ಕೆ.ಇ.ಎಸ್ ಕೈಗಾರಿಕಾ ತರಬೇತಿ ಸಂಸ್ಥೆ ನಿಂಬರ್ಗಾ, ಪ್ರಿಯದರ್ಶಿನಿ ಕೈಗಾರಿಕಾ ತರಬೇತಿ ಸಂಸ್ಥೆ ಕಲಬುರಗಿ, ಡಾ.ಬಿ.ಆರ್.ಅಂಬೇಡ್ಕರ್ ಕೈಗಾರಿಕಾ ತರಬೇತಿ ಸಂಸ್ಥೆ ಕಮಲಾಪೂರ, ಮಹಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಅಫಜಲಪೂರ ಹಾಗೂ ಝೋಹರಾ ಕೈಗಾರಿಕಾ ತರಬೇತಿ ಸಂಸ್ಥೆ ಕಲಬುರಗಿ.
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರನ್ನು ಹಾಗೂ ಕಲಬುರಗಿ (ಮಹಿಳಾ) ಸರ್ಕಾರಿ ತರಬೇತಿ ಸಂಸ್ಥೆಯ ದೂರವಾಣಿ ಸಂಖ್ಯೆ 08472-278611ಗೆ ಸಂಪರ್ಕಿಸಲು ಕೋರಲಾಗಿದೆ.