ಭಾಲ್ಕಿ: ಮಾತೆ ಮತ್ತು ಮಾತೃಭಾಷೆಗೆ ಪ್ರಥಮ ಪ್ರಾಮುಖ್ಯತೆ ಕೊಡಬೇಕು ಎಂದು ಖ್ಯಾತ ಉದ್ಯಮಿ ರಾಜಾರಾಮ ಬಿಯಾಣಿ ನುಡಿದರು. ಭಾಲ್ಕಿಯ ಸದ್ಗುರು ವಿದ್ಯಾಸಂಸ್ಥೆಯಲ್ಲಿ ನಡೆದ ೬೫ನೇ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನವಿಕಾಸಕ್ಕಾಗಿ ಅನೇಕ ಭಾಷೆಗಳನ್ನು ಅಧ್ಯಯನ ಮಾಡುವದು ಅವಶ್ಯಕ. ಆದರೆ ನಾವು ವಾಸಿಸುವ ನಾಡಿನ ಭಾಷೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಫಿಲಿಪ್ಸ್ ಕಂಪನಿಯ ವ್ಯವಸ್ಥಾಪಕ ತೋಶಿಫ್, ಟ್ಯಾಲಿ ಕಂಪನಿಯ ಉದ್ಯೋಗಿ ರಾಜಯೋಗಿ, ಔರಾದನ ಉದ್ಯಮಿ ಮಹಾದೇವ ಮುದ್ದಾ, ಹಿರಿಯ ಮುಖಂಡ ಬಂಡೆಪ್ಪ ಮೀಸೆ, ಸಿವಿಲ್ ಇಂಜಿನಿಯರ್ ಅವಿನಾಶ, ಕನ್ಯಾಕುಮಾರಿ ಯಾಲಾ, ಮುಂತಾದವರು ಮಾತನಾಡಿದರು.
ಪತ್ರಕರ್ತ ಸೋಮನಾಥ ಮುದ್ದಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಅಕ್ಷಯಕುಮಾರ ಮುದ್ದಾ ಸ್ವಾಗತಿಸಿದರು. ರಾಜಕುಮಾರ ಮೇತ್ರೆ ನಿರ್ವಹಿಸಿದರು. ಮುಖ್ಯಗುರು ಸುಜಾತಾ ಪಾಟೀಲ ವಂದಿಸಿದರು.