ಪಟಾಕಿ ನಿಷೇಧಕ್ಕೆ ಕರವೇ ಖಂಡನೆ

0
26

ಕಲಬುರಗಿ: ಕೊರೊನಾ ಸೊಂಕಿತರಿಗೆ ತೊಂದರೆಯಾಗಲಿದೆ ಎಂಬ ಕಾರಣ ನೀಡಿ ಸಂಪ್ರದಾಯಿಕ ಪಟಾಕಿ ನಿಷೇಧಿಸುವ ಮೂಲಕ ಪಟಾಕಿ ಉದ್ಯಮದಲ್ಲಿ ತೊಡಗಿರುವವರ ವಿರುದ್ಧ ಸರಕಾರ ಗದಾ ಪ್ರಹಾರ ನಡೆಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ) ಬಣ ದ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿಯಾದ ಗೋಪಾಲ ನಾಟೀಕಾರ ಆರೋಪಿಸಿದ್ದಾರೆ.

ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಿರುವ ಸರಕಾರದ ಕ್ರಮ ಖಂಡನೀಯವಾಗಿದೆ. ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಈ ವೃತಿಯಲ್ಲಿ ತೊಡಗಿರುವವರಿಗೆ ಪರಿಹಾರವೇನು ? ಎಂಬುದನ್ನು ಪರಿಶೀಲಿಸಬೇಕು. ಜೊತೆಗೆ ಅವರಿಗೆ ಪರಿಹಾರ ಕಲ್ಪಿಸಿ ನಿಷೇಧಿಸಿದಂತಹ ಕ್ರಮಕ್ಕೆ ಮುಂದಾಗಬೇಕು ಎಂದರು‌.

Contact Your\'s Advertisement; 9902492681

ತಕ್ಷಣಾ ಸರಕಾರ ಈ ಆದೇಶವನ್ನು ಹಿಂಪಡೆಯಬೇಕು. ಮುನ್ನಚ್ಚರಿಕೆ ಕ್ರಮ ಅನುಸರಿಸಿ ಪಟಾಕಿ ಮಾರಾಟ ಮಾಡುವುದು ಎಚ್ಚರಿಕೆಯಿಂದ ಪಟಾಕಿ ಹಚ್ಚಿ ದೀಪಾವಳಿ ಆಚರಿಸಲು ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪಟಾಕಿಯಿಂದ ಕೊರೊನಾ ಬರುವ ಕುರಿತು ಸಾಬೀತಾಗಿಲ್ಲ. ಜನರ ಮುನ್ನೆಚ್ಚರಿಕೆಯಿಂದ ಕೊರೊನಾ ಸೊಂಕು ಇಳಿಮುಖವಾಗುತ್ತಿದೆ. ಆದರೂ ಪಟಾಕಿ ನಿಷೇಧ ಮಾಡಿರುವುದರಲ್ಲಿ ತರ್ಕವೇ ಇಲ್ಲ. ದೀಪಾ ಹಚ್ಚಿದರೆ , ಚಪ್ಪಾಳೆ ಹೊಡೆದರೆ ಕೊರೊನಾ ಹೋಗುತ್ತದೆ ಎಂದು ಹಾಸ್ಯದ ಹೇಳಿಕೆಗಳನ್ನು ನೀಡಲಾಗುತ್ತಿತ್ತು. ಇದೀಗ ಪಟಾಕಿ ಹೊಡೆದರೆ ಕೊರೊನಾ ಬರುತ್ತದೆ ಎಂದು ಮತ್ತೊಂದು ಹಾಸ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here