ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಿಂದ ಕಲಬುರಗಿ ಜಿಲ್ಲೆಯ ನಿವಾಸಿಗಳಿಗೆ ಮತ್ತೊಂದು ಶುಭ ಸುದ್ದಿ ನೀಡಿದ್ದು, ಇದೀಗ ನವೆಂಬರ್ 18ರಂದು ಕಲಬುರಗಿಯಿಂದ ರಾಜಧಾನಿ ದೆಹಲಿಗೆ ವಾರದಲ್ಲಿ ಮೂರು ಬಾರಿ ವಿಮಾನ ಹಾರಟ ನಡೆಸಲಿದೆ ಎಂದು ಸ್ಟಾರ್ ಏರ್ ತಿಳಿಸಿದೆ.
ಸ್ಟಾರ್ ಏರ್ ವೇಳಾಪಟ್ಟಿ ಪ್ರಕಾರ, ಕಲಬುರಗಿಯಿಂದ-ದೆಹಲಿಗೆ ಮತ್ತು ದೆಹಲಿಯಿಂದ-ಕಲಬುರಗಿಗೆ ಮಂಗಳವಾರ, ಬುಧವಾರ ಹಾಗೂ ಶನಿವಾರ ವಿಮಾನ ಹಾರಟ ಮಾಡಲಿದ್ದು, ಬುಕಿಂಗ್ ಸಹ ಆರಂಭವಾಗಿದೆ ಎಂದು ತಿಳಿಸಿದೆ.
ಸ್ಟಾರ್ ಏರ್ ಬೆಂಗಳೂರು ಕಲಬುರಗಿ-ಕಲಬುರಗಿ-ಬೆಂಗಳೂರು ಹಾಗೂ ಕಲಬುರಗಿ-ಹುಬ್ಬಳ್ಳಿ ಹಾಗೂ ಇತ್ತೀಚಿಗೆ ಕಲಬುರಗಿಯಿಂದ ಮುಂಬೈಗೆ ವಿಮಾನ ಹಾರಟ ಆರಂಭಿಸಿತು. ಸದ್ಯ ನವೆಂಬರ್ 18 ರಿಂದ ದೆಹಲಿಗೂ ಬುಕಿಂಗ್ ಆರಂಭಿಸಿ ರಾಜಧಾನಿಗೆ ಪ್ರಯಾಣಿಸುವವರಿಗೆ ಅನುಕೂಲ ಮಾಡಿಕೊಟ್ಟಿದೆ.