ಕಲಬುರಗಿ: ಕನಾ೯ಟಕ ಅಲ್ಪಸಂಖ್ಯಾತ K.M.D.C ಅಧ್ಯಕ್ಷರಾದ ಮುಕ್ತಾರ ಪಠಾಣ್ ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಭಾರತೀಯ ಜನತಾ ಪಕ್ಷದ ಉತ್ತರ ಮಂಡಲದ ಕಾಯಾ೯ಲಯದಲ್ಲಿ ಇಂದು ಸಂಜೆ ಪೂರ್ವ ಭಾವಿ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಅಲ್ಪಸಂಖ್ಯಾತರ ಮೋಚಾ೯ದ ಅಧ್ಯಕ್ಷರಾದ ಅಬ್ದುಲ್ ರಬ್ ಸಾಬ್, ಪಕ್ಷದ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ, ಅಶೋಕ ಮಾನಕರ್, ವಕ್ಫ್ ಬೋಡ್ ಅಧ್ಯಕ್ಷರಾದ ಖಾಜಾಹುಸೇನ ಅಥ್ನೋರ ನೇತೃತ್ವದಲ್ಲಿ ಸಭೆ ನಡೆಯಿತು.
ಕಾಯಾ೯ದಶಿ೯ ಬಿ ಜಯಸಿಂಗ್, ಆಬ್ದುಲ್ ಸತ್ತಾರ ಗೋಲಾ, ಜಾವೀದ್ ಪಟೇಲ್, ಅಬ್ದುಲ್ ಸತ್ತಾರ, ಕೆ ನಜಮೊದ್ದೀನ್ ಸಾಬ್, ನಾಸೀರ್ ಅಹ್ಮದ್, ರಿಜ್ವಾನ್ ಹುಸೇನ್, ಸಾಕೀಬ್ ಮತ್ತಿತರ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.